ಗುರುಮಠಕಲ್ : ಪುರಸಭೆ ನೂತನ ಉಪಾಧ್ಯಕ್ಷೆ ಭೀಮಮ್ಮ ಮುಕ್ಕಡಿ ಪದಗ್ರಹಣ ಸಮಾರಂಭವು ಗುರುಮಠಕಲ್ ಪುರಸಭೆ ಆವರಣದಲ್ಲಿ ನಡೆಯಿತು.
ಇದೇ ವೇಳೆ, ಗುರುಮಠಕಲ್ ಜನತೆ ಸಹಕಾರದಿಂದ, ಪಟ್ವಣದಲ್ಲಿ ಕಳೆದ ವರ್ಷಗಳಿಂದ ಉಳಿದ ಕೆಲಸವನ್ನು ಮುಂದುವರಿಸಿ ಪೂರ್ಣಗೊಳಿಸುತ್ತೇನೆ ಮತ್ತು ಪ್ರಾಮಾಣಿಕವಾಗಿ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ತಾಲೂಕು ಜೆಡಿಎಸ್ ಅಧ್ಯಕ್ಷ ಶರಣು ಆವಂಟಿ, ತಾ.ಪಂ ಸದಸ್ಯ ನಾಗೇಶ ಚಂಡ್ರಿಕಿ, ಪ್ರಕಾಶ ನೀರೆಟಿ, ರವಿಂದರೆಡ್ಡಿ, ಭೀಮಶಪ್ಪ ಗುಡಿಸೆ, ಮಲ್ಲಿಕಾರ್ಜುನ ಕಾಕಲವಾರ, ಭೀಮಶಪ್ಪ ಪಡಿಗೆ, ಲಾಲಪ್ಪ ಕಂದೂರ, ವೀರಪ್ಪ ಪಾಟಿ, ಅಕ್ಬರ್, ಚಾಂದಪಾಶ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಪುರಸಭೆ ಸಿಬ್ಬಂದಿ ಇದ್ದರು.