ಗುರುಮಠಕಲ್: ತಾಂಡಾದ ಕ್ವಾರೆಂಟೈನ್ ಕೇಂದ್ರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ, ಈ ಕೇಂದ್ರವನ್ನು ಸ್ಥಳಾಂತರ ಮಾಡುವಂತೆ ಮೊಗ್ದಂಪುರ ತಾಂಡಾದ ಜನರು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ 50ಕ್ಕೂ ಹೆಚ್ಚು ಜನರನ್ನು ತಾಂಡಾದ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. 8-10 ದಿನಗಳು ಕಳೆದಿದ್ರೂ ಕೋವಿಡ್ -19 ಪರೀಕ್ಷೆ ಮಾಡಿಸಿಲ್ಲ. ಈಗಾಗಲೇ ಗ್ರಾಮದಲ್ಲಿ ಕ್ವಾರೆಂಟೈನ್ ಕೇಂದ್ರದಲ್ಲಿದ್ದ 3 ಜನರಿಗೆ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ತಾಂಡಾ ನಿವಾಸಿಗಳಿಗೆ ಮತ್ತಷ್ಟು ಆತಂಕ ತಂದಿದೆ.
ಕೆಲವರು ಕ್ವಾರೆಂಟೈನ್ ಕೇಂದ್ರಕ್ಕೆ ತೆರಳಿ ಊಟ, ಉಪಚಾರ ಮಾಡಿಸುತ್ತಿರುವುದು ಭಯ ಹುಟ್ಟಿಸಿದೆ. ಅಲ್ಲದೇ ಈ ಕೇಂದ್ರದಲ್ಲಿ ಯಾವುದೇ ಭದ್ರತೆಯಿಲ್ಲ ಎಂದು ಆರೋಪಿಸಿ ಕ್ವಾರೆಂಟೈನ್ ಕೇಂದ್ರ ಸ್ಥಳಾಂತರಕ್ಕೆ ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ.