ETV Bharat / state

ನಂಬರ್ ನಮ್ಮತ್ರ ಇದೆ.. ಅಧಿಕಾರವೂ ನಮ್ದೆ.. ಕಾಂಗ್ರೆಸ್‌ ನಾಯಕನ ವಿಶ್ವಾಸ

ಬಿಜೆಪಿ ನಾಯಕರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡುವ ಕನಸನ್ನು ಕಾಣಬಾರದು ಎಂದು ಕಾಂಗ್ರೆಸ್​ ಶಾಸಕ ಶರಣಬಸಪ್ಪ ದರ್ಶನಾಪುರ ಬಿಜೆಪಿ ನಾಯಕರ ಕಾಲೆಳೆದರು.

ಕಾಂಗ್ರೆಸ್​ ಶಾಸಕ ಶರಣಬಸಪ್ಪ ದರ್ಶನಾಪುರ
author img

By

Published : Jul 3, 2019, 10:53 AM IST

ಯಾದಗಿರಿ : ರಾಜ್ಯದಲ್ಲಿ ಬಿಜೆಪಿ ನಾಯಕರು ಆಪರೇಷನ್​ ಕಮಲ ಮಾಡುವ ಮುಖಾಂತರ ಮೈತ್ರಿ ಸರ್ಕಾರಕ್ಕೆ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್​ ಶಾಸಕ ಶರಣಬಸಪ್ಪ ದರ್ಶನಾಪುರ ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ತೀರ್ಪು ನೀಡಿ ಆಡಳಿತ ನಡೆಸಲು ಸಮಿಶ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಆದರೆ, ಬಿಜೆಪಿ ನಾಯಕರು ಪ್ರತಿಪಕ್ಷದಲ್ಲಿ ಕುಳಿತಕೊಂಡು ಜನರ ಪರವಾಗಿ ಕೆಲಸ ಮಾಡದೇ ಆಪರೇಷನ್​ ಕಮಲಕ್ಕೆ ಕೈ ಹಾಕಿ ದೋಸ್ತಿ ಸರ್ಕಾರಕ್ಕೆ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್​ ಶಾಸಕರಿಗೆ ಹಣ, ಅಧಿಕಾರ, ಮಂತ್ರಿಗಿರಿಯ ಆಮಿಷ ತೋರಿಸುವ ಮೈತ್ರಿಯನ್ನು ಕೆಡವಲು ಮುಂದಾಗಿದ್ದಾರೆ. ಆದರೆ, ಅದು ಯಾವ ಕಾಲಕ್ಕೂ ಆಗದು. ಬಿಜೆಪಿ ನಾಯಕರು ಆಪರೇಷನ್​ ಕಮಲ ಕೈಬಿಬೇಕು ಎಂದರು.

ಆನಂದ್​ ಸಿಂಗ್ ಹಾಗೂ ರಮೇಶ್​ ಜಾರಕಿಹೊಳಿ ಮೊದಲಿನಿಂದಲೂ ರಾಜೀನಾಮೆ ಬಗ್ಗೆ ಮಾತನಾಡುತ್ತಿದ್ದಾರೆ ಹೊರೆತು ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಅಂತಾ ಎಲ್ಲೂ ಹೇಳಿಲ್ಲ. ಅವರು ರಾಜೀನಾಮೆ ನೀಡಿರುವುದು ಅವರ ವೈಯಕ್ತಿಕ ವಿಚಾರ‌. ಅವರು ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ ಎನ್ನುವುದು ವದಂತಿ ಎಂದರು. ದೋಸ್ತಿ ಸರ್ಕಾರ ಪತನವಾಗಬೇಕಾದರೆ 15 ಶಾಸಕರು ರಾಜೀನಾಮೆ ನೀಡಬೇಕು. ಆದರೆ, ನಮ್ಮಲ್ಲಿ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಂಬರ್ ನಮ್ಮ ಹತ್ರ ಇದೆ. ಅಧಿಕಾರ ನಮ್ಮ ಹತ್ರ ಇದೆ. ಹೀಗಾಗಿ ಬಿಜೆಪಿ ನಾಯಕರು ಮಾಡುತ್ತಿರುವ ಶ್ರಮ ವ್ಯರ್ಥ ಪ್ರಯತ್ನ ಎಂದರು.

Intro:ಯಾದಗಿರಿ : ರಾಜ್ಯದಲ್ಲಿ ಬಿಜೆಪಿ ನಾಯಕರು ಅಪರೇಶನ ಕಮಲ ಮಾಡುವ ಮುಖಾಂತರ ಮೈತ್ರಿ ಸರಕಾರಕ್ಕೆ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಶರಣಬಸಪ್ಪ‌ ದರ್ಶನಾಪುರ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನಾಪುರ ಈ ಟಿ ವಿ ಭಾರತ್ ಪ್ರತಿನಿಧಿಯೊಂದಿಗೆ ಮಾತನಾಡಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ತೀರ್ಪು ನೀಡಿ ಆಡಳಿತ ನಡೆಸಲು ಸಮಿಶ್ರ ಸರಕಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅದ್ರೆ ಬಿಜೆಪಿ ನಾಯಕರು ವಿರೋಧ ಪಕ್ಷದಲ್ಲಿ ಕುಳಿತಕೊಂಡು ಜನರ ಪರವಾಗಿ ಕೆಲಸ ಮಾಡದೆ ಅಪರೇಶ್ನ ಕಮಲಕ್ಕೆ ಕೈ ಹಾಕಿ ದೋಸ್ತಿ ಸರಕಾರಕ್ಕೆ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಹಣ ,ಅಧಿಕಾರ, ಮಂತ್ರಿಗಿರಿ ಹೀಗೆ ಹಲವಾರು ವಿಧಗಳಲ್ಲಿ ಶಾಸಕರಿಗೆ ಆಮೀಷವೊಡ್ಡಿ ಬಿಜೆಪಿ ಸರಕಾರ ರಚನೆ ಮಾಡಬೇಕೆಂದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ. ಆದ್ರೆ ಯಾವ ಕಾಲಕ್ಕೂ ಅದೂ ಈಡೈರುವುದಿಲ್ಲ . ಹೀಗಾಗಿ ಬಿಜೆಪಿ ನಾಯಕರು ಅಪರೇಶನ ಕಮಲ ಕೈ ಹಾಕದೆ ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಜನರ ಪರವಾಗಿ ಕೆಲಸ ಮಾಡಿ ಎಂದು ಶಾಸಕ ದರ್ಶನಾಪುರ ಬಿಜೆಪಿ ನಾಯಕರಿಗೆ ತಾಕಿತ್ತು ಮಾಡಿದ್ದಾರೆ.

ಶಾಸಕ ಆನಂದ ಸಿಂಗ್ ಹಾಗೂ ರಮೇಶ ಜಾರಕಿಹೊಳೆ ಮೊದಲಿನಿಂದಲೂ ರಾಜೀನಾಮೆ ನೀಡುತ್ತೆನೆ ಎಂದು ಹೇಳಿಕೊಂಡು ಬಂದಿದ್ದಾರೆ, ಹೊರತು ಬಿಜೆಪಿ ಪಕ್ಷಕ್ಕೆ ಸೇರುತ್ತೆನೆ ಅಂತ ಅಲ್ಲ. ಅವರು ರಾಜೀನಾಮೆ ನೀಡಿರುವುದು ಅವರ ವ್ಯಯಕ್ತಿಕ ವಿಚಾರ‌ ಅದೂ ಬಿಟ್ಟು ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ ಎಂದು ಬಿಜೆಪಿ ನಾಯಕರು ಹರಡಿಸಿರುವ ವದಂತಿ ಶುದ್ದ ಸುಳ್ಳು ಎಂದು ಗುಡಿಗಿದರು.

Body:ದೋಸ್ತಿ ಸರಕಾರ ಪತನವಾಗಬೇಕಾದ್ರೆ 15 ಶಾಸಕರು ರಾಜೀನಾಮೆ ನೀಡಬೇಕು. ಆದ್ರೆ ನಮ್ಮಲ್ಲಿ ಯಾವ ಶಾಸಕರು ರಾಜೀನಾಮೆ ನೀಡುವುದಿಲ್ಲ‌ ನಾವೆಲ್ಲ ಶಾಸಕರು ಒಗ್ಗಟಾಗಿದ್ದೆವೆ. ನಂಬರ್ ನಮ್ಮ ಹತ್ರ ಇದೆ. ಅಧಿಕಾರ ನಮ್ಮ ಹತ್ರ ಇದೆ. ಹೀಗಾಗಿ ಬಿಜೆಪಿ ನಾಯಕರು ಮಾಡುವ ಅಪರೇಶನ ಕಮಲ ವ್ಯರ್ಥ ಪ್ರಯತ್ನ ಎಂದರು.

Conclusion:ಬಿಜೆಪಿ ನಾಯಕರು ಸುಳ್ಳು ವದಂತಿಗಳನ್ನು ಎಬ್ಬಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ರಚನೆ ಮಾಡುವ ಕನಸು ನನಸಾಗುವುದಿಲ್ಲ ಎಂದು ಶಾಸಕ ದರ್ಶನಾಪುರ ಕುಟುಕಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.