ETV Bharat / state

ಹೇಳಿಕೆ ಕೊಡುವ ಮುನ್ನ ನಿಮ್ಮ ತಂದೆಯವರಿಗೆ ಕೇಳಿ ತಿಳಿದುಕೊಳ್ಳಿ: ಪ್ರಿಯಾಂಕ್​ಗೆ ರಾಜೂಗೌಡ ಟಾಂಗ್​ - ಪ್ರಿಯಾಂಕ್ ಖರ್ಗೆ ಹೇಳಿಕೆಗೆ ರಾಜೂ ಗೌಡ ಪ್ರತಿಕ್ರಿಯೆ

ಪ್ರಿಯಾಂಕ್ ಖರ್ಗೆಯವರು (Priyank Kharge) ದಯವಿಟ್ಟು ಇಲ್ಲಸಲ್ಲದ ಹೇಳಿಕೆ ಕೊಡಬೇಡಿ. ಸುಮ್ಮನೆ ಪೊಲೀಸ್​​ ಅಧಿಕಾರಿಗಳ ವಿರುದ್ಧ ಆರೋಪ ಮಾಡುವ ಮುನ್ನ ನಿಮ್ಮ ತಂದೆಯವರಿಗೆ ಕೇಳಿ ತಿಳಿದುಕೊಳ್ಳಿ, ಆಮೇಲೆ ಈ ಬಗ್ಗೆ ಹೇಳಿಕೆ ನೀಡಿ ಎಂದು ಶಾಸಕ ರಾಜೂಗೌಡ ತಾಕೀತು ಮಾಡಿದ್ದಾರೆ.

mla-raju-gowda-reaction-on-priyank-kharge-statement
ಪ್ರಿಯಾಂಕ್​ಗೆ ರಾಜೂಗೌಡ ಟಾಂಗ್​
author img

By

Published : Nov 15, 2021, 11:15 AM IST

Updated : Nov 15, 2021, 12:47 PM IST

ಯಾದಗಿರಿ: ಪ್ರಿಯಾಂಕ್ ಖರ್ಗೆ (MLA Priyank Kharge) ಅವರು ತಮ್ಮ ತಂದೆ ಮಾಡಿದ ಕೆಲಸ ಮರೆತಿದ್ದಾರೆ. ಅವರ ತಂದೆಯವರು ವಿವಿಧ ಖಾತೆ ನಿರ್ವಹಿಸಿದ್ದು, ಅವರನ್ನೇ ಕೇಳಿ ತಿಳಿದುಕೊಳ್ಳಿ. ನೀವು ಒಂದು ಬೆರಳು ತೋರಿಸಿದರೆ, ಇತರ ನಾಲ್ಕು ಬೆರಳುಗಳು ನಿಮ್ಮ ಕಡೆಗೇ ತೋರುತ್ತವೆ, ಆರೋಪ ಮಾಡುವ ಮುನ್ನ ಯೋಚಿಸಬೇಕು ಎಂದು ಶಾಸಕ ರಾಜೂಗೌಡ (MLA raju gowda) ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದ (bitcoin scam) ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು. ಪ್ರಿಯಾಂಕ್ ಅವರು ದಯವಿಟ್ಟು ಇಲ್ಲ ಸಲ್ಲದ ಹೇಳಿಕೆ ಕೊಡಬೇಡಿ. ಸುಮ್ಮನೆ ಪೊಲೀಸ್​​ ಅಧಿಕಾರಿಗಳ ವಿರುದ್ಧ ಆರೋಪ ಮಾಡುವ ಮುನ್ನ ನಿಮ್ಮ ತಂದೆಯವರಿಗೆ ಕೇಳಿ ತಿಳಿದುಕೊಳ್ಳಿ, ಆ ಮೇಲೆ ಈ ಬಗ್ಗೆ ಹೇಳಿಕೆ ನೀಡಿ ಎಂದು ತಿಳಿಸಿದರು.

ಶಾಸಕ ರಾಜೂಗೌಡ ಪ್ರತಿಕ್ರಿಯೆ

ಕಾಂಗ್ರೆಸ್​​ನವರಿಗೆ ಬಿಟ್ ಕಾಯಿನ್ (bitcoin issue) ಬಗ್ಗೆ ಸರಿಯಾಗಿ ಗೊತ್ತಿಲ್ಲ. ಆದರೆ, ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರದ ಯಾವುದೇ ತಪ್ಪು ಕಂಡು ಬಂದಿಲ್ಲ, ಹೀಗಾಗಿ ಬಿಟ್ ಕಾಯಿನ್ ನೆಪವಿಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರತಿಪಕ್ಷದ ನಾಯಕರು ದಾಖಲೆಗಳಿಲ್ಲದೇ ಸುಳ್ಳು ಆರೋಪ ಮಾಡಿ ರಾಜ್ಯದ ಜನರಿಗೆ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಕಾಂಗ್ರೆಸ್ ನಾಯಕರು ಮಾಡುವ ಆರೋಪಕ್ಕೆ ಘನತೆ ಹಾಗೂ ತೂಕವಿಲ್ಲ. ಕಾಂಗ್ರೆಸ್​​ನವರು ಜನರು ತಲೆಯಲ್ಲಿ ಬಿಟ್ ಕಾಯಿನ್ ಬಗ್ಗೆ ಹುಳ ಬಿಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister basavaraj bommai) ಅವರು ರಾಜ್ಯದಲ್ಲಿ ಜನಪರ ಕಾಳಜಿ ವಹಿಸಿ ಜನ ಮೆಚ್ಚುವಂತಹ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಬೊಮ್ಮಾಯಿ ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು (Congress Leaders) ಸುಖಾಸುಮ್ಮನೆ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Watch.. ಸ್ಕೂಟರ್​ನೊಂದಿಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ: ಧರ್ಮಸ್ಥಳ ವಿಪತ್ತು ತಂಡದಿಂದ ರಕ್ಷಣೆ

Last Updated : Nov 15, 2021, 12:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.