ಯಾದಗಿರಿ: ಲಾಕ್ಡೌನ್ನಿಂದ ಶಹಾಪುರ ತಾಲೂಕಿನ ಫುಡ್ ಕ್ಯಾಂಪ್‍ನಲ್ಲಿ ಇರಿಸಲಾಗಿದ್ದ 209 ಜನ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತದ ವತಿಯಿಂದ ರಾಜ್ಯ ಸಾರಿಗೆ ಬಸ್‍ಗಳ ಮೂಲಕ ಅವರವರ ಸ್ವಗ್ರಾಮಗಳಿಗೆ ಸುರಕ್ಷಿತವಾಗಿ ತಲುಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್ ಮಾಹಿತಿ ನೀಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದೆ. ತಮಿಳುನಾಡು, ಮಹಾರಾಷ್ಟ್ರ ರಾಜ್ಯಕ್ಕೆ ತೆರಳುತ್ತಿದ್ದ 209 ವಲಸೆ ಕಾರ್ಮಿಕರನ್ನು ಶಹಾಪುರ ತಾಲೂಕಿನ ಫುಡ್ ಕ್ಯಾಂಪ್‍ನಲ್ಲಿ ಸುಮಾರು 35 ದಿನಗಳವರೆಗೆ ಇರಿಸಲಾಗಿತ್ತು.
ಜಿಲ್ಲಾಡಳಿತ ವತಿಯಿಂದ ವಲಸೆ ಕಾರ್ಮಿಕರಿಗೆ ಎಲ್ಲಾ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಂತೆ ಬಸ್‍ಗಳ ಮೂಲಕ ಅವರ ಸ್ವಗ್ರಾಮಕ್ಕೆ ತಲುಪಿಸಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಲಾಗಿದೆ.