ETV Bharat / state

ಸುಕ್ಷೇತ್ರ ಯಾನಾಗುಂದಿ ಬೆಟ್ಟದಲ್ಲಿ 101 ಶಿವಲಿಂಗಗಳ ಪ್ರತಿಷ್ಠಾಪನೆ - MLA Naganagowda Kandakura

ಸುಕ್ಷೇತ್ರ ಯಾನಾಗುಂದಿ ಬೆಟ್ಟದ ಮಾತೆ ಮಾಣಿಕೇಶ್ವರಿ ದೇವಸ್ಥಾನದಲ್ಲಿ 101 ಶಿವಲಿಂಗಗಳ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ನೆರವೇರಿಸಿದರು.

ಶಿವಲಿಂಗಗಳ ಪ್ರತಿಷ್ಠಾಪನೆ
ಶಿವಲಿಂಗಗಳ ಪ್ರತಿಷ್ಠಾಪನೆ
author img

By

Published : Aug 24, 2022, 10:20 PM IST

ಗುರುಮಠಕಲ್: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಭಕ್ತಿ, ಶ್ರದ್ಧೆಯಿಂದ ದೇವರ ಆರಾಧನೆ ಮಾಡುವುದರಿಂದ ಮನಸ್ಸು ಪ್ರಸನ್ನತೆ ಪಡೆಯುವುದು. ಇದೇ ಬದುಕಿನ ಸಾರ್ಥಕತೆಯ ಮಾರ್ಗ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಹೇಳಿದರು.

ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ಮಾತನಾಡಿದರು

ಯಾನಾಗುಂದಿ ಬೆಟ್ಟದ ಮಾತೆ ಮಾಣಿಕೇಶ್ವರಿ ದೇವಸ್ಥಾನದಲ್ಲಿ 101 ಶಿವಲಿಂಗಗಳ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಸದಾ ನಾನು ಬದ್ಧ. ಈ ಪೂಜಾ ಕಾರ್ಯಗಳಿಂದ ನಾನು ಮತ್ತು ನಮ್ಮ ಕುಟುಂಬ ವರ್ಗ ಮಾತ್ರವಲ್ಲದೇ ನಮ್ಮ ಎಲ್ಲಾ ಕಾರ್ಯಕರ್ತರು ಪುನೀತರಾಗಿದ್ದೇವೆ. ಮತಕ್ಷೇತ್ರದ ಜನತೆಯ ಸಮಗ್ರ ಅಭಿವೃದ್ಧಿಯಾಗಲಿ, ಸಮೃದ್ಧಿಯಾಗಲಿ ಎಂದು ಈ ಸಂದರ್ಭದಲ್ಲಿ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.

ಪಾದಯಾತ್ರೆ: ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ನೇತೃತ್ವದಲ್ಲಿ ಗುರುಮಠಕಲ್‌ನ ಶಾಸಕರ ಜನ ಸಂಪರ್ಕ ಕಚೇರಿಯಿಂದ ಯಾನಾಗುಂದಿಗೆ ತಲುಪುವ ಪಾದಯಾತ್ರೆ ಆರಂಭವಾಗಿದೆ. ಪಕ್ಷದ ಮುಖಂಡರು, ಟೀಂ ಎಸ್‌ಎನ್‌ಕೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಗಲಿಗೆ ಕೆಂಪು ಸಮವಸ್ತ್ರ ಹಾಕಿಕೊಂಡು ಮಾತೆ ಮಾಣಿಕೇಶ್ವರಿಗೆ ಜೈಕಾರ ಹಾಕುತ್ತ ಹೆಜ್ಜೆ ಹಾಕಿದರು.

ಇದನ್ನೂ ಓದಿ: ದೇಶದಲ್ಲೇ ಮೊದಲು ಆರೋಗ್ಯ ಕ್ಷೇತ್ರಕ್ಕಾಗಿ ವಿಷನ್‌ ಡಾಕ್ಯುಮೆಂಟ್‌ : ಡಾ ಕೆ ಸುಧಾಕರ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.