ಸೇಡಂ: ಹೈದರಾಬಾದ್ ಸಮೀಪದ ಶಂಕರಪಲ್ಲಿಯಿಂದ ಕಾಲ್ನಡಿಗೆ ಮೂಲಕ ಕಲಬುರಗಿ ಜಿಲ್ಲೆಯ ಚಿತ್ತಾಪುರಕ್ಕೆ ಹೊರಟಿದ್ದ ಬಡ ಕುಟುಂಬಗಳಿಗೆ ಸೇಡಂನ ಸ್ಥಳೀಯರು ಸಹಾಯ ಮಾಡಿದ್ದಾರೆ.
ಸತತ ಮೂರು ದಿನಗಳಿಂದ ಸುಮಾರು 150 ಕಿ.ಮೀ. ಕ್ರಮಿಸಿ ಸೇಡಂ ತಲುಪಿದ 10 ಜನರ ಬಡಪಾಯಿಗಳಿಗೆ ಊಟ ಜೊತೆಗೆ ವಾಹನ ವ್ಯವಸ್ಥೆ ಮಾಡಿ ಚಿತ್ತಾಪುರಕ್ಕೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.