ಮಂಗಳೂರು (ದಕ್ಷಿಣ ಕನ್ನಡ) : ರೈತರಿಂದ ನೇರವಾಗಿ ಮುಡಾ ನಗರಾಭಿವೃದ್ಧಿ ಪ್ರಾಧಿಕಾರ ಜಮೀನು ಪಡೆದಿದ್ದೇ ಆದಲ್ಲಿ ಅವರಿಗೆ 50-50 ನಲ್ಲಿ ಸೈಟ್ ಕೊಡಲೇಬೇಕು. ಈ 50-50 ರಲ್ಲಿ ದುರುಪಯೋಗ ಆಗಿದ್ದಲ್ಲಿ ಅವರಿಗೆ ಶಿಕ್ಷೆಯಾಗಬೇಕು. ತಪ್ಪಾಗಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಯಾರೇ ಆಗಲಿ, ನನ್ನ ಸಂಬಂಧಿಗಳೇ ಆಗಲಿ ಕಾನೂನು ವಿರುದ್ಧ ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು ಎಂದು ಶಾಸಕ ಜಿ. ಟಿ ದೇವೇಗೌಡ ಹೇಳಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಜಿ. ಟಿ ದೇವೇಗೌಡರ ಸಂಬಂಧಿ ಮಹೇಂದ್ರ ಎಂಬುವವರು ಮುಡಾದಿಂದ 19 ನಿವೇಶನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಒಂದು ಎಕರೆ ಜಾಗವನ್ನು ಪೂರ್ತಿ ಸ್ವಾಧೀನ ಪಡಿಸಿಕೊಂಡಿದ್ದು, ದುಡ್ಡಿನ ಪರಿಹಾರವನ್ನು ಕೊಟ್ಟಿದ್ದರೆ ಮಾತ್ರ ಒಂದು ಸೈಟು. ಆ ಜಮೀನಿಗೆ ಪರಿಹಾರವೇ ಕೊಡದಿದ್ದಲ್ಲಿ, 50-50ರಲ್ಲಿ ಸೈಟು ಪಡೆದಿದ್ದಲ್ಲಿ ರೈತನ ಜಮೀನಿಗೆ ಅವರು ಕೊಡಬೇಕಾಗಿರುವುದನ್ನ ಕಾನೂನು ಬದ್ಧವಾಗಿ ಕೊಡಬೇಕು ಎಂಬುದನ್ನ ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ : ಸ್ನೇಹಮಯಿ ಕೃಷ್ಣ ಅವರನ್ನು ಗಡಿಪಾರು ಮಾಡಿ; ಮತ್ತೊಂದು ದೂರು ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್ ನಿಯೋಗ