ETV Bharat / state

ಕೋವಿಡ್ ನಿರ್ವಹಣೆಯಲ್ಲಿ ಹಣಕಾಸಿನ ಜವಾಬ್ದಾರಿ, ನಿಯಂತ್ರಣ ನನ್ನ ವ್ಯಾಪ್ತಿಗೆ ಬಂದಿಲ್ಲ: ಸಂಸದ ಸಿ.ಎನ್.ಮಂಜುನಾಥ್ - MP C N MANJUNATH

ಕೋವಿಡ್ ನಿರ್ವಹಣೆ ವಿಚಾರದಲ್ಲಿ ಯಾವುದೇ ಹಣಕಾಸಿನ ಜವಾಬ್ದಾರಿಯಾಗಲಿ, ನಿಯಂತ್ರಣವಾಗಲಿ ನನ್ನ ವ್ಯಾಪ್ತಿಗೆ ಬಂದಿಲ್ಲ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.

mp c n manjunath
ಡಾ.ಸಿ.ಎನ್.ಮಂಜುನಾಥ್ (ETV Bharat)
author img

By ETV Bharat Karnataka Team

Published : Nov 16, 2024, 6:12 PM IST

ಬೆಂಗಳೂರು: ''ಕೋವಿಡ್ ನಿರ್ವಹಣೆ ವಿಚಾರದಲ್ಲಿ ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ನನ್ನ‌ ಹೆಸರು ಪ್ರಸ್ತಾಪವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ನಾನು ಕೊವೀಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥನಾಗಿರಲಿಲ್ಲ'' ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ''ಕೇವಲ ಸಮಿತಿಯ ಸದಸ್ಯನಾಗಿ ಅನೇಕ ತಜ್ಞರು, ವೈದ್ಯರು, ಸರ್ಕಾರಿ ಅಧಿಕಾರಿಗಳ ಜೊತೆ ಸೇರಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕೊವೀಡ್ ನಿಯಂತ್ರಣದ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡುವುದಷ್ಟೇ ನನ್ನ ಜವಾಬ್ದಾರಿ ಆಗಿತ್ತು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಹಣಕಾಸಿನ ಜವಾಬ್ದಾರಿಯಾಗಲಿ, ನಿಯಂತ್ರಣವಾಗಲಿ ನನ್ನ ವ್ಯಾಪ್ತಿಗೆ ಬರುತ್ತಿರಲಿಲ್ಲ'' ಎಂದು ಹೇಳಿದ್ದಾರೆ.

''ಸಚಿವ ಸಂಪುಟದ ಮಾರ್ಗದರ್ಶನದಲ್ಲಿ ಕೊವೀಡ್ ನಿರ್ವಹಣೆ ನಡೆಯುತ್ತಿತ್ತು. ಆದರೂ ಕೆಲವು ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಉಲ್ಲೇಖಿಸಲಾಗುತ್ತಿರುವುದು ನನಗೆ ನೋವು ತರಿಸಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾನು ಮಠದ ಹುಡುಗ, ಆದಿಚುಂಚನಗಿರಿ ಸ್ವಾಮೀಜಿ ಮಡಿಲಲ್ಲಿ ಬೆಳೆದವ: ಜಮೀರ್​ ಅಹ್ಮದ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.