ETV Bharat / state

ಗುರುಮಠಕಲ್: ಭೀಮಾ ನೀರಿನ ಸರಬರಾಜು ಪುರಸಭೆಗೆ ನೀಡುವಂತೆ ಒತ್ತಾಯ - ಭೀಮಾ ನೀರಿನ ಸರಬರಾಜು ವಿಚಾರ

ಗುರುಮಠಕಲ್ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನೀರು ಸರಬರಾಜು ವಿಚಾರವಾಗಿ ತುರ್ತು ಸಭೆ ನಡೆದಿದ್ದು, ಪಟ್ಟಣಕ್ಕೆ ಭೀಮಾನೀರಿನ ಸರಬರಾಜು ಪುರಸಭೆ ಮೂಲಕವೇ ನಡೆಯಲಿ ಎಂಬ ಒತ್ತಾಯ ಸದಸ್ಯರಿಂದ ಕೇಳಿ ಬಂದಿದೆ.

gurumatkal pattana panchayath meetinggurumatkal pattana panchayath meeting
ಭೀಮಾ ನೀರಿನ ಸರಬರಾಜು ಕುರಿತಂತೆ ಸಭೆ
author img

By

Published : Feb 10, 2021, 1:56 PM IST

ಗುರುಮಠಕಲ್; ಯಾದಗಿರಿಯ ಭೀಮಾನದಿಯಿಂದ 32 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಸರಬರಾಜು ನಿರ್ವಹಣೆ ಕಳೆದ 7 ವರ್ಷಗಳಿಂದ ಪುರಸಭೆಯಿಂದಲೇ ನಿರ್ವಹಣೆ ಆಗುತ್ತಿದ್ದು, ಇದನ್ನೇ ಮುಂದುವರಿಸುವಂತೆ ಒತ್ತಾಯ ಕೇಳಿ ಬಂದಿದೆ.

ಭೀಮಾ ನೀರಿನ ಸರಬರಾಜು ಕುರಿತಂತೆ ಸಭೆ

ಗುರುಮಠಕಲ್ ಪಟ್ಟಣಕ್ಕೆ ಮತ್ತು 32 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಮೂರು ಘಟಕಗಳಾದ ಗುರುಸುಣಗಿ ಜಾಕ್ವೆಲ್ ಡಬ್ಲೂ ಟಿಪಿ ಅರಕೇರಾ ಮತ್ತು ಧರ್ಮಾಪುರ ಮಧ್ಯಂತರ ನೀರೆತ್ತುವ ಘಟಕಗಳ ನೀರು ಸರಬರಾಜು ನಿರ್ವಹಣೆಯನ್ನು 2020-21ನೇ ಸಾಲಿನಲ್ಲಿ ಏಜೆನ್ಸಿಗೆ ನೀಡುವ ಕುರಿತಂತೆ ನಡೆದ ಚರ್ಚೆಯಲ್ಲಿ ಸದಸ್ಯರು ಭಾಗವಹಿಸಿದ್ರು. ಪಟ್ಟಣಕ್ಕೆ 2014 ರಿಂದ ಪುರಸಭೆ ನೇತೃತ್ವದಲ್ಲಿ ಉತ್ತಮ ರೀತಿಯಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಅದರ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡದೇ ಪುರಸಭೆ ವಶದಲ್ಲಿಯೇ ಮುಂದುವರಿಸಲಿ ಎಂದು ಪುರಸಭೆ ಸದಸ್ಯರು ಒತ್ತಾಯಿಸಿದ್ದಾರೆ.

ಕಳೆದ 7 ವರ್ಷಗಳಿಂದ ಅರಕೇರಿ, ಧರ್ಮಪೂರ್, ರಾಮಸಮುದ್ರದಲ್ಲಿರುವ ಶುದ್ಧ ನೀರಿನ ಘಟಕಗಳು ಸೇರಿದಂತೆ ಎಲ್ಲ ವೆಚ್ಚವನ್ನು ಪುರಸಭೆ ಭರಿಸಿದೆ. ಎರಡು ದಿನಗಳಿಗೊಮ್ಮೆ ಜನರಿಗೆ ಕುಡಿಯಲು ಶುದ್ದ ನೀರು ಪೂರೈಕೆ ನಿರ್ವಹಣೆ ಪುರಸಭೆಯೇ ಮಾಡುತ್ತಿದ್ದು ಸರಕಾರ ದಿಢೀರ್ ನಿರ್ಣಯವಾಗಿ ಆರ್.ಡಬ್ಲು.ಎಸ್‌ಗೆ ನಿರ್ವಹಣೆ ಮಾಡಲು ಆದೇಶಿಸಿದ್ದನ್ನು ರದ್ದುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗುವುದು. ಉತ್ತಮ ಏಜೆನ್ಸಿಗೆ ನೀಡುವುದಿದ್ದರೂ ಪುರಸಭೆ ವತಿಯಿಂದಲೇ ಏಜೆನ್ಸಿಯನ್ನು ನೀಡಲಾಗುವುದು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷೆ ಭೀಮಮ್ಮ ಮುಕುಡಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಹಾಗೂ ಸದಸ್ಯರಾದ ರವೀಂದ್ರರೆಡ್ಡಿ ಶೇರಿ, ವ್ಯವಸ್ಥಾಪಕ ಮಲ್ಲಿಕಾರ್ಜುನ, ರಾಮುಲು ಗೌಡ್, ಅನಿಲ್ ಯರಗಾಳ, ಪರುಶರಾಮ್, ಬಸವರಾಜ್, ಅಶೋಕ್ ಕಲಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ-2021 ಉದ್ಘಾಟಿಸಲಿರೋ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.