ಸುರಪುರ: ಮೇವು ತುಂಬಿದ್ದ ಟ್ರ್ಯಾಕ್ಟರ್ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಬೆಂಕಿ ತಗುಲಿ ಟ್ರಾಲಿಯ ಸಮೇತ ಮೇವು ಸುಟ್ಟು ಭಸ್ಮವಾದ ಘಟನೆ ಕೊಳ್ಳೂರ ಗ್ರಾಮದ ಬಳಿ ನಡೆದಿದೆ.
ದೇವದುರ್ಗ ಇಂದಿರಾ ನಗರದ ರೈತ ಚೆನ್ನಪ್ಪ ದೊರೆ ಎಂಬಾತನ ಟ್ರ್ಯಾಕ್ಟರ್ಗೆ ಬೆಂಕಿ ತಗುಲಿದೆ. ಕೊಳ್ಳೂರಿನಲ್ಲಿಯ ಅವರ ಸಂಬಂಧಿಯ ಜಮೀನಿನಲ್ಲಿನ ಭತ್ತದ ಹುಲ್ಲು ಪಡೆದು ಸಾಗುಸುತ್ತಿದ್ದ ವೇಳೆ ಘಟನೆ ಜರುಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬರುವಷ್ಟರಲ್ಲಿ ಹುಲ್ಲು ಹಾಗೂ ಟ್ರಾಕ್ಟರ್ ಟ್ರಾಲಿ ಸುಟ್ಟು ಕರಕಲಾಗಿದೆ.
ಜೆಸ್ಕಾಂ ನಿರ್ಲಕ್ಷ್ಯದಿಂದ ತಂತಿ ಜೋತು ಬಿದ್ದ ಕಾರಣ ಈ ಘಟನೆ ನಡೆದಿದ್ದು, ಈ ಕುರಿತು ಗ್ರಾಮದ ರೈತರು ಹಲವು ಬಾರಿ ವಿದ್ಯುತ್ ಇಲಾಖೆಯ ಗಮನಕ್ಕೆ ತಂದರು ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಇವರ ನಿರ್ಲ್ಯಕ್ಷದಿಂದ ಇಂದು ರೈತನಿಗೆ ದೊಡ್ಡ ನಷ್ಟವುಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಟ್ರಾಕ್ಟರ್ ಟ್ರಾಲಿ ಮತ್ತು ಹುಲ್ಲು ಕಳೆದುಕೊಂಡು ರೈತ ಚಿಂತೆಗೀಡಾಗಿದ್ದು ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.