ETV Bharat / state

ಶ್ರೀರಾಮುಲು ಕಾರು ಅಡ್ಡಹಾಕಿ ನಿಲ್ಲಿಸಿದ ಚಿಂಚನಸೂರ್: ಏಕಲವ್ಯ ವಸತಿ ಶಾಲೆ ಉದ್ಘಾಟನೆ ರದ್ದು - ಸಚಿವ ಬಿ. ಶ್ರೀರಾಮಲು

ಯಾದಗಿರಿಯ ಏಕಲವ್ಯ ವಸತಿ ಶಾಲೆ ಉದ್ಘಾಟನೆಗೆಂದು ತೆರಳುತ್ತಿದ್ದ ಸಚಿವ ಬಿ.ಶ್ರೀರಾಮಲು ಅವರ ಕಾರನ್ನು ಮಾಜಿ ಸಚಿವ ಚಿಂಚನಸೂರ್ ಅಡ್ಡಗಟ್ಟಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆ ಯಾದಗಿರಿ ತಾಲೂಕಿನ ಬಂದಳ್ಳಿಯಲ್ಲಿ ನಡೆದಿದೆ.

ಚಿಂಚನಸೂರ್
ಚಿಂಚನಸೂರ್
author img

By

Published : Oct 10, 2021, 8:50 AM IST

ಯಾದಗಿರಿ: ಏಕಲವ್ಯ ವಸತಿ ಶಾಲೆ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವ ಶ್ರೀರಾಮುಲು ಕಾರನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅಡ್ಡಗಟ್ಟಿ ನಿಲ್ಲಿಸಿದ ಘಟನೆ ನಡೆಯಿತು.

ಶ್ರೀರಾಮುಲು ಅವರು ಜಿಲ್ಲೆಯ ಏಕಲವ್ಯ ಮಾದರಿ ವಸತಿ ಶಾಲೆ ಉದ್ಘಾಟನೆಗೆ ಬಂದಿದ್ದ ಸಂದರ್ಭದಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಉದ್ಘಾಟನೆ ಮಾಡದಂತೆ ಸಚಿವರಿಗೆ ಘೇರಾವ್​ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರಿಗೆ ಸಚಿವರು ಕಾರ್ಯಕ್ರಮ ಉದ್ಘಾಟನೆ ಮಾಡದೆ ಹಿಂದಿರುಗಿದರು.

ಶ್ರೀರಾಮುಲು ಕಾರನ್ನು ಅಡ್ಡಹಾಕಿ ನಿಲ್ಲಿಸಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್

ಚಿಂಚನಸೂರ್ ವರ್ತನೆಗೆ ಶ್ರೀರಾಮಲು ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವರ ಮನವೊಲಿಕೆಗೆ ಸ್ಥಳೀಯ ಮುಖಂಡರು ಎಷ್ಟೇ ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ, ಕೊನೆಗೂ ಉದ್ಘಾಟನಾ ಕಾರ್ಯಕ್ರಮ ರದ್ದಾಯಿತು.

ಚಿಂಚನಸೂರ್ ಅಸಮಾಧಾನವೇನು?

ನಂತರ ಮಾತನಾಡಿದ ಬಾಬುರಾವ್ ಚಿಂಚನಸೂರ್, 'ನಾನು ಕ್ಯಾಬಿನೆಟ್ ಸಚಿವ. ಅಧಿಕಾರಿಗಳು ನನ್ನನ್ನು ಕಡೆಗಣಿಸಿದ್ದಾರೆ. ನಾನೇ ನಿಯೋಜಿಸಿದ ಅಧಿಕಾರಿಗಳು ನನ್ನ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಅದಕ್ಕೆ ಯಾದಗಿರಿ ಕಾರ್ಯಕ್ರಮ ರದ್ದುಪಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಚಿವ ಶ್ರೀರಾಮುಲು ಅವರಲ್ಲಿ ದಿನಾಂಕ ನಿಗದಿಪಡಿಸಿಕೊಂಡು 1 ಲಕ್ಷ ಜನರನ್ನು ಸೇರಿಸಿ, ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸುತ್ತೇನೆ' ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.