ETV Bharat / state

ಆರ್​ ಆರ್​ ನಗರದಲ್ಲಿ ಯಾಮಾರಿದ್ವಿ, ಆದ್ರೆ ಮಸ್ಕಿಯಲ್ಲಿ ಹಾಗಾಗಲ್ಲ: ಡಿಕೆಶಿ ವಿಶ್ವಾಸ - Maski by election news

ಪಕ್ಷ ಸಂಘಟನೆಗಾಗಿ ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೋಮವಾರ ಸುರಪುರಕ್ಕೆ ಭೇಟಿ ನೀಡಿದ್ದರು. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ಬಳಿಕ ಮಾತನಾಡಿದ ಅವರು, ಆರ್​ ಆರ್​ ನಗರ ಉಪಚುನಾವಣೆಯಲ್ಲಿ ಯಾಮಾರಿದಂತೆ ಮಸ್ಕಿಯಲ್ಲಿ ಯಾಮಾರುವುದಿಲ್ಲ ಎಂದರು.

ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​
author img

By

Published : Nov 24, 2020, 1:49 AM IST

Updated : Nov 24, 2020, 6:24 AM IST

ಸುರಪುರ: ಬಿಜೆಪಿಯವರದು ರಾಜ್ಯ ಮತ್ತು ಸಮುದಾಯ ಒಡೆಯುವ ಕೆಲಸ, ಕಾಂಗ್ರೆಸ್ ಪಕ್ಷದ್ದು ಕೂಡಿಸುವ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ರಾತ್ರಿ ಸುರಪುರ ನಗರಕ್ಕೆ ಆಗಮಿಸಿದ ಡಿಕೆಶಿ ಅವರು, ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಬಳಿಕ ಮಾತನಾಡಿದ ಅವರು "ಬೆಂಗಳೂರು ಚುನಾವಣೆ ಬೇರೆ, ಇಲ್ಲಿಯ ಚುನಾವಣೆಯೇ ಬೇರೆ. ಮಸ್ಕಿ ಕ್ಷೇತ್ರದ ಉಪಚುನಾವಣೆ ಎದುರಿಸಲು ಈಗಾಗಲೇ ಕಾಂಗ್ರೆಸ್ ಪಕ್ಷವು ತಳಮಟ್ಟದಿಂದ ಚುನಾವಣೆ ಕಾರ್ಯತಂತ್ರ ರೂಪಿಸಿ, ಸಂಘಟನೆ ಮಾಡಲಾಗುತ್ತಿದೆ. ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಉತ್ತಮ ಫಲಿತಾಂಶ ಬರಲಿದೆ ಎನ್ನುವ ಮೂಲಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮಸ್ಕಿ ಕ್ಷೇತ್ರದ ಉಪಚುನಾವಣೆ ಗೆಲ್ಲಲು ಹೊಸ ತಂತ್ರ ರೂಪಿಸಿರುವ ಬಗ್ಗೆ ಡಿ ಕೆ ಶಿವಕುಮಾರ್ ಮಾಹಿತಿ ​

ಆರ್ ಆರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಯಾಮಾರಿದೆ. ಮಸ್ಕಿ ಕ್ಷೇತ್ರದಲ್ಲಿ ಹೀಗಾಗುವುದಿಲ್ಲ. ಹೊಸ ತಂತ್ರ ಹೂಡಿ ಮಸ್ಕಿ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಪ್ರಚಾರ ಮಾಡಲಾಗುತ್ತದೆ ಎಂದರು.

ಡಿ ಕೆ ಶಿವಕುಮಾರ ಅವರು ಸುರಪುರ ನಗರಕ್ಕೆ ಬರುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಬೈಕ್​ ಱಲಿ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಸಂಸದ ಬಿ.ವಿ. ನಾಯಕ ಸೇರಿದಂತೆ ಅನೇಕ ಜನ ಮುಖಂಡರು ಉಪಸ್ಥಿತರಿದ್ದರು.

Last Updated : Nov 24, 2020, 6:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.