ETV Bharat / state

ಅಜೀಂ ಪ್ರೇಮ್​ಜಿ ಫೌಂಡೇಶನ್‌ನಿಂದ ಆಶಾ ಕಾರ್ಯಕರ್ತೆಯರಿಗೆ ಥರ್ಮಲ್​ ಸ್ಕ್ಯಾನರ್​ ವಿತರಣೆ..

author img

By

Published : Jun 26, 2020, 9:45 PM IST

ತರಬೇತಿಯ ನಂತರ ಆಶಾ ಕಾರ್ಯಕರ್ತರು ವೈಯಕ್ತಿಕವಾಗಿ ಅಜೀಂ ಪ್ರೇಮ್​​ಜಿ ಫೌಂಡೇಷನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಜೊತೆಗೆ ಅವರ ವೈಯಕ್ತಿಕ ಆರೋಗ್ಯ ಮಾಹಿತಿಯನ್ನು ಇದರಿಂದ ತಿಳಿದುಕೊಳ್ಳಲು ಸಹಾಯಕವಾಗುವುದು ಎಂದು ಅಭಿಪ್ರಾಯಪಟ್ಟರು..

Distribution of Thermal Scanner to Asha Workers by Azim Premji Foundation
ಅಜೀಂ ಪ್ರೇಮ್​ಜಿ ಫೌಂಡೇಶನ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಥರ್ಮಲ್​ ಸ್ಕ್ಯಾನರ್​ ವಿತರಣೆ

ಸುರಪುರ (ಯಾದಗಿರಿ): ಸುರಪುರ ಮತ್ತು ಹುಣಸಿಗೆ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ಮತ್ತು ಪಲ್ಸ್ ಆಕ್ಸಿ ಮೀಟರ್ ಕುರಿತು ತರಬೇತಿ ನೀಡಲಾಯಿತು.

ಅಜೀಂ ಪ್ರೇಮ್​ಜಿ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ಹಾಗೂ ಪಲ್ಸ್ ಆಕ್ಸಿ ಮೀಟರ್ ವಿತರಿಸಲಾಯಿತು. ಅದನ್ನು ಬಳಸುವ ಕುರಿತು ಇಂದು ತಾಲೂಕಿನ ವಿವಿಧ ಕಡೆ ಕೆಂಭಾವಿ ಹುಣಸಗಿ ಸುರಪುರ ಆರೋಗ್ಯ ಕೇಂದ್ರಗಳಲ್ಲಿ ತರಬೇತಿ ಆಯೋಜಿಸಲಾಗಿತ್ತು.

ಇದರಿಂದ ಆಶಾ ಕಾರ್ಯಕರ್ತರು ಗ್ರಾಮದಲ್ಲಿ ಕುಟುಂಬ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಪ್ರಾಥಮಿಕ ಮಾಹಿತಿ ಕಲೆ ಹಾಕುವ ವೇಳೆ ಆರೋಗ್ಯದಲ್ಲಿ ವ್ಯತ್ಯಾಸವಾದ್ರೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಶಿಫಾರಸು ಮಾಡಲು ಸಹಾಯಕವಾಗುವುದು.

ತರಬೇತಿಯ ನಂತರ ಆಶಾ ಕಾರ್ಯಕರ್ತರು ವೈಯಕ್ತಿಕವಾಗಿ ಅಜೀಂ ಪ್ರೇಮ್​​ಜಿ ಫೌಂಡೇಷನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಜೊತೆಗೆ ಅವರ ವೈಯಕ್ತಿಕ ಆರೋಗ್ಯ ಮಾಹಿತಿಯನ್ನು ಇದರಿಂದ ತಿಳಿದುಕೊಳ್ಳಲು ಸಹಾಯಕವಾಗುವುದು ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಗಳಾಗಿ ಎಪಿಎಫ್​​ನ ರಂಗನಾಥ್ ಬೆನಕಟ್ಟಿ, ವಿನೋದ್ ಕುಮಾರ್, ಚಂದ್ರಕಾಂತ ರೆಡ್ಡಿ, ಮಲ್ಲೇಶ್ ವಗ್ಗಾರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.