ಯಾದಗಿರಿ: ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಪರ್ಶಿಸಿ ಬಾಲಕಿ ಸಾವಿಗೀಡಾದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ನಡೆದಿದೆ. ಅಗತೀರ್ಥ ಗ್ರಾಮದ ಅಂಜಲಿ (8) ಮೃತ ಬಾಲಕಿ. ಬಾಲಕಿ ಆಟವಾಡುತ್ತಾ ಟ್ರಾನ್ಸ್ಫಾರ್ಮರ್ ಬಳಿ ಹೋದಾಗ ಈ ದುರ್ಘಟನೆ ಸಂಭವಿಸಿದೆ.
ವಿದ್ಯುತ್ ಟ್ರಾನ್ಸ್ಫಾರ್ಮರ್ ಗೆ ಬೇಲಿ ಹಾಕದಿದ್ದಕ್ಕೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂಬ ಆರೋಪಗಳು ಕೇಳಿಬಂದಿವೆ. ಈ ಪ್ರಕರಣ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ರಾಜ್ಯದಲ್ಲೂ ಕಲ್ಲಿದ್ದಲು ಕೊರತೆಯ ತೂಗುಗತ್ತಿ: ಯರಮರಸ್ ಉಷ್ಣ ಸ್ಥಾವರ ಕಾರ್ಯಸ್ಥಗಿತ; ಸದ್ಯ ಹೀಗಿದೆ ಸ್ಥಿತಿಗತಿ
ಈ ಹಿಂದೆ 2014 ರಲ್ಲಿ ಅಗತೀರ್ಥ ಗ್ರಾಮದ ಜಟ್ಟೆಪ್ಪ ಎಂಬುವವರು ಇದೇ ಸ್ಥಳದಲ್ಲಿ ಮರಣ ಹೊಂದಿದ್ದರು. ಅಂದೇ ಜೆಸ್ಕಾಂ ಇಲಾಖೆಯವರು ಮುಜಾಗ್ರತೆ ಕ್ರಮ ವಹಿಸಿ ಟಿಸಿ ಸುತ್ತಲು ಕಾಂಪೌಂಡ್ ನಿರ್ಮಾಣ ಮಾಡಿ ಅಥವಾ ಎತ್ತರಕ್ಕೆ ಅದನ್ನು ಸ್ಥಾಪಿಸಿದ್ದರೆ ಇಂದು ಈ ಸಾವು ಸಂಭವಿಸುತ್ತಿರಲಿಲ್ಲ. ಅದಕ್ಕಾಗಿ ಅತೀ ಶೀಘ್ರದಲ್ಲೇ ಪರಿಹಾರ ಘೋಷಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.