ಸುರಪುರ (ಯಾದಗಿರಿ) : ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೊರೊನಾ ಹರಡುವಿಕೆ ತಡೆಯಲು ರೂಪಿಸಲಾದ ಮಾರ್ಗಸೂಚಿಗಳನ್ನು ಗಾಳಿ ತೂರಿ ಬೇಜಾಬ್ದಾರಿ ತೋರಲಾಗಿದೆ.
ಕಳೆದ ಒಂದು ವಾರದ ಹಿಂದೆ ಕೆನರಾ ಬ್ಯಾಂಕ್ನ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ 3 ದಿನಗಳ ಕಾಲ ಬ್ಯಾಂಕ್ ಶಾಖೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಬ್ಯಾಂಕ್ ಮತ್ತೆ ತೆರೆದಿದ್ದು, ಗ್ರಾಹಕರು ನಿಯಮಗಳನ್ನು ಮರೆತು ಮುಗಿಬಿದ್ದ ದೃಶ್ಯಗಳು ಕಂಡು ಬಂತು.
ಬ್ಯಾಂಕ್ ಮುಂದೆ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಗುಂಪಾಗಿ ಸೇರಿದ್ದ ದೃಶ್ಯ ಕಂಡು ಬಂತು. ಈ ಪೈಕಿ ಅನೇಕರು ಕನಿಷ್ಠ ಪಕ್ಷ ಮಾಸ್ಕ್ ಕೂಡ ಧರಿಸಿರಲಿಲ್ಲ. ಸ್ವತಃ ಸಿಬ್ಬಂದಿಗೆ ಕೊರೊನಾ ಬಂದಿರುವ ಬ್ಯಾಂಕ್ ಶಾಖೆಯಲ್ಲಿ ಈ ರೀತಿ ಬೇಜವ್ದಾರಿ ತೋರಿದರೆ, ಇನ್ನಷ್ಟು ಜನಕ್ಕೆ ಸೋಂಕು ಹರಡುವುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ.