ETV Bharat / state

ಟೆಂಟ್​​​ಹೌಸ್ ಮಾಲೀಕರಿಗೆ ಕೋವಿಡ್‌ ಹೊಡೆತ; ದುಡಿಮೆ ಸಮಯದಲ್ಲಿ ಕೈ ಕಟ್ಟಿದ ಲಾಕ್​ಡೌನ್ - ಕೊರೊನಾ ಕರಿಛಾಯೆ

ಕೊರೊನಾ ಹಾವಳಿಯಿಂದಾಗಿ ಶಾಮಿಯಾನ ಉದ್ಯಮ ತೊಂದರೆಗೊಳಗಾಗಿದ್ದು, ಇದನ್ನು ನಂಬಿಕೊಂಡಿರುವ ಕಾರ್ಮಿಕ ಬದುಕು ದುಸ್ತರವಾಗಿದೆ. ಮನುಕುಲಕ್ಕೆ ಮಾರಕ ತಂದ ಕೊರೊನಾ ಟೆಂಟ್​​ಹೌಸ್ ಮಾಲೀಕರನ್ನು ಬಿಡದೆ ಕಾಡುತ್ತಿದೆ.

Coronavirus lock-down effect on tent house owners life
ಟೆಂಟ್​​​ಹೌಸ್ ಮಾಲೀಕರ ಮೇಲೆ ಕೊರೊನಾ ಕರಿಛಾಯೆ
author img

By

Published : Sep 12, 2020, 5:25 PM IST

ಯಾದಗಿರಿ : ಕೊರೊನಾ ಎಲ್ಲರನ್ನು ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ತಳ್ಳಿದ್ದು ಸುಳ್ಳಲ್ಲ. ಜಾತ್ರೆ, ಉಪನಯನ, ಮದುವೆ ಸೇರಿದಂತೆ ಮತ್ತಿತರೆ ಶುಭ ಸಮಾರಂಭಗಳಿಗೆ ಅತ್ಯಾವಶ್ಯಕವಾಗಿ ಬೇಕಾದ ಟೆಂಟ್​​​ಹೌಸ್ ಕೂಡ ಇದರ ಹೊರತಾಗಿಲ್ಲ. ಕೊರೊನಾ ಪರಿಣಾಮದಿಂದಾಗಿ ಹತ್ತು ಹಲವು ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ತಿಲಾಂಜಲಿ ನೀಡಿದ್ದರಿಂದ ಟೆಂಟ್​​ಹೌಸ್ ಮಾಲೀಕರು ಈ ವಿಷ ವರ್ತುಲದಲ್ಲಿ ನಲುಗಿ ಹೋಗಿದ್ದಾರೆ.

Coronavirus lock-down effect on tent house owners life
ಟೆಂಟ್​​​ಹೌಸ್ ಮಾಲೀಕರ ಮೇಲೆ ಕೊರೊನಾ ಕರಿಛಾಯೆ

ಕೇಂದ್ರ ಸರ್ಕಾರ ಈಗ ಅನ್​ಲಾಕ್​ ಘೋಷಣೆ ಮಾಡಿದೆ. ಆದರೂ ಸಹ ವ್ಯಾಪರವಿಲ್ಲದೇ ಟೆಂಟ್​​ಹೌಸ್ ವ್ಯಾಪಾರಸ್ಥರು ಸಂಕಷ್ಟದಲ್ಲಿಯೇ ಕಾಲ ದೂಡುತ್ತಿದ್ದಾರೆ. ಮನುಕುಲಕ್ಕೆ ಮಾರಕ ತಂದ ಕೊರೊನಾ ಟೆಂಟ್​​ಹೌಸ್ ಮಾಲೀಕರನ್ನು ಬಿಟ್ಟಿತೇ? ಲಾಕ್​ಡೌನ್​ ಹೇರಿಕೆಯಿಂದ ಜಿಲ್ಲೆಯ ಟೆಂಟ್​​ಹೌಸ್ ಮಾಲೀಕರ ಈ ವರ್ಷದ ಸಂಪೂರ್ಣ ಆದಾಯ ಪಾತಾಳಕ್ಕಿಳಿದಿದೆ. ಜಾತ್ರೆ, ಉಪನಯನ, ಮದುವೆ ಸೇರಿದಂತೆ ಮತ್ತಿತರೆ ಶುಭ ಸಮಾರಂಭಗಳಿಗೆ ಕೇಂದ್ರ ತೀಲಾಂಜಲಿ ಹೇಳಿದ್ದರಿಂದ ಜಿಲ್ಲೆಯ ನೂರಾರು ಟೆಂಟ್​​ಹೌಸ್ ಮಾಲೀಕರು, ಡೆಕೋರೇಟಿಂಗ್​ ಕೆಲಸಗಳಿಲ್ಲದೆ ಮನೆಯಲ್ಲೇ ಇರುವಂತಾಯಿತು.

ಮದುವೆ, ಶುಭ ಸಮಾರಂಭಗಳಿಗೆ ಬೇಕಾದ ಶಾಮಿಯಾನ, ಕುರ್ಚಿ, ವೇದಿಕೆ ಹೀಗೆ... ಅಗತ್ಯ ವಸ್ತುಗಳ ಪೂರೈಕೆ ಮಾಡಿ ಅದರಿಂದ ಬರುವ ಆದಾಯವನ್ನೇ ನಂಬಿ ಜೀವನ ನಡೆಸುತ್ತಿದ್ದೆವು. ಲಾಕ್​ಡೌನ್​ ಹೇರಿಕೆಯಿಂದ ನಮ್ಮ ಬದುಕು ಇದೀಗ ಹೇಳತೀರದಾಗಿದೆ. ಸಾಮಾನ್ಯವಾಗಿ ಮಾರ್ಚ್​​ನಿಂದ ಜೂನ್‌ ವರೆಗೆ ಕಾರ್ಯಕ್ರಮಗಳು ಹೆಚ್ಚಾಗಿರುತ್ತಿದ್ದರಿಂದ ಸಂಪಾದನೆ ಹೆಚ್ಚಾಗುತ್ತಿತ್ತು. ಬದುಕು ನಮ್ಮ ಕೈಯಲ್ಲಿರುತ್ತಿತ್ತು. ಆದರೆ, ಇದೀಗ ದಿಕ್ಕುತೋಚದಂತಾಗಿದೆ. ಕಾರ್ಮಿಕರಿಗೆ ವೇತನ, ಬಾಡಿಗೆ ಸೇರಿದಂತೆ ನಮ್ಮ ಜೀವನ ನಿರ್ವಹಣೆಯೂ ಇದೀಗ ದುಃಸ್ತರವಾಗಿದೆ ಎನ್ನುತ್ತಾರೆ ಟೆಂಟ್​​ಹೌಸ್ ಮಾಲೀಕ ಶಿವರಾಜ್.

ಟೆಂಟ್​​​ಹೌಸ್ ಮಾಲೀಕರ ಮೇಲೆ ಕೊರೊನಾ ಕರಿಛಾಯೆ

ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಟೆಂಟ್​​ಹೌಸ್​​ಗಳಿವೆ. ಸರ್ಕಾರವೇನೋ ಅನ್​ಲಾಕ್​ ಮಾಡಿ ಕೈತೊಳೆದುಕೊಂಡಿತು. ಆದರೆ, ಲಾಕ್​ಡೌನ್​ ಬಳಿಕ ನಡೆಯಬೇಕಿದ್ದ ಕಾರ್ಯಕ್ರಮಗಳ ಸೀಸನ್​ ಮುಗಿದಿದ್ದರಿಂದ ವ್ಯಾಪಾರ ಮಾತ್ರ ಥಂಡಾ ಹೊಡೆದಿವೆ. ಮೂರ್ನಾಲ್ಕು ತಿಂಗಳ ಸೀಜನ್​​ನಲ್ಲಿ ವರ್ಷದ ಆದಾಯವನ್ನು ತೆಗೆಯುತ್ತಿದ್ದೆವು. ಆದರೆ, ಹೆಮ್ಮಾರಿ ಕೊರೊನಾ ಎಲ್ಲವನ್ನು ಕಸಿದುಕೊಂಡಿದೆ. ಇದರಿಂದ ಶಾಮಿಯಾನ ಹಾಕುವ, ಅಡುಗೆ ಮಾಡುವ, ಡೆಕೋರೇಟಿಂಗ್​ ಮಾಡುವ ನೂರಾರು ಕಾರ್ಮಿಕರ ಕೆಲಸವನ್ನು ಕಿತ್ತುಕೊಳ್ಳುವ ಮೂಲಕ ಅವರನ್ನು ಬೀದಿಗೆ ತಳ್ಳಿದೆ. ಹಾಗಾಗಿ ಅಂಗಡಿ ಮಾಲೀಕರ ಹಾಗೂ ಕಾರ್ಮಿಕರ ನೆರವಿಗೆ ಸರ್ಕಾರ ಕೂಡಲೇ ಮುಂದಾಗಬೇಕು ಎನ್ನುತ್ತಾರೆ ಅಡಿಗೆ ಕೆಲಸ ಮಾಡುವವರಾದ ಶ್ರವಣ್​ ಕುಮಾರ.

ಒಟ್ಟಾರೆ ಮಹಾಮಾರಿ ಕೊರೊನಾದಿಂದ ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ಹೊಡೆತ ಕೊಟ್ಟಂತೆ ಮದುವೆ ಸಮಾರಂಭಗಳನ್ನೇ ನಂಬಿ ಬದುಕುತ್ತಿದ್ದ ಟೆಂಟ್​​ಹೌಸ್ ಮಾಲೀಕರಿಗೂ ಹೊಡೆತ ಕೊಟ್ಟಿದ್ದು ಸರ್ಕಾರ ಇವರ ಸಂಕಷ್ಟವನ್ನು ಆಲಿಸಲಿ ಅನ್ನೋದು ನಮ್ಮ ಅಭಿಲಾಷೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.