ETV Bharat / state

ಕೊರೊನಾ ವಾರಿಯರ್​ಗಳಲ್ಲಿ ಸೋಂಕು: ಸಾರ್ವಜನಿಕರಲ್ಲಿ ಹೆಚ್ಚಾದ ಭೀತಿ - ಆಸ್ಪತ್ರೆ ಸೀಲ್‌ಡೌನ್

ಸುರಪುರ ನಗರದಲ್ಲಿ ಆಶಾ ಕಾರ್ಯಕರ್ತೆಯರು, ಬಸ್ ಚಾಲಕ ಹಾಗೂ ನರ್ಸ್​ಗೆ ಕೊರೊನಾ ವೈರಸ್ ದೃಢಪಟ್ಟಿದೆ. ಹೀಗಾಗಿ ಅವರ ಸಂಪರ್ಕಿತರ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಇಡೀ ಸುರಪುರ ನಗರವೇ ಕೊರೊನಾದಿಂದ ಬೆಚ್ಚಿ ಬೀಳುವಂತಾಗಿದೆ.

warriors
warriors
author img

By

Published : Jun 20, 2020, 9:43 AM IST

ಸುರಪುರ (ಯಾದಗಿರಿ): ಯಾದಗಿರಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಕೊರೊನಾ ಪ್ರಕರಣ ಕಂಡು ಬಂದಿದ್ದು, ಸುರಪುರ ನಗರದ ಆಸರ ಮೊಹಲ್ಲಾದ ದಂಪತಿಗಳಲ್ಲಿ. ಅಲ್ಲಿಂದ ಆರಂಭಗೊಂಡು ಇಲ್ಲಿಯವರೆಗೆ ಬೇರೆ ರಾಜ್ಯದಿಂದ ಬಂದವರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಕೊರೊನಾ ವಾರಿಯರ್​ಗಳಲ್ಲಿ ಸೊಂಕು ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರಲ್ಲಿ ಕೊರೋನಾ ಭೀತಿ ಹೆಚ್ಚಿದಂತಾಗಿದೆ.

ನಗರದ ದೀವಳಗುಡ್ಡಾದ ಇಬ್ಬರು ಆಶಾ ಕಾರ್ಯಕರ್ತೆಯರಲ್ಲಿ ಕೊರೊನಾ ಕಾಣಿಸಿಕೊಂಡಿದ್ಧು, ಇವರಿಂದ ಇನ್ನು ಯಾರಿಗೆ ಸೋಂಕು ತಗುಲಿದೆ ಎಂಬ ಕುರಿತು ಪತ್ತೆ ಮಾಡಲು ಈ ಆಶಾ ಕಾರ್ಯಕರ್ತೆಯರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡಿ ಗಂಟಲು ದ್ರವ ಪರೀಕ್ಷೆಗೆ ನಿರ್ಧರಿಸಲಾಗಿದೆ.

ಕೊರನಾ ವಾರಿಯರ್​ಗಳಲ್ಲಿ ಸೋಂಕು

ಮತ್ತೊಂದೆಡೆ ಬಸ್ ಘಟಕದಲ್ಲಿನ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುವವರಲ್ಲಿ ಸೋಂಕು ಕಾಣಿಸಿಕೊಂಡಿದ್ಧು, ಈ ಚಾಲಕನ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರೂ ನಿರ್ಲಕ್ಷ್ಯ ತೋರಲಾಗಿತ್ತು. ವೈದ್ಯರೇ ಒತ್ತಾಯ ಮಾಡಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದರಿಂದ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇವರ ಪತ್ನಿ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದು, ಅವರಿಗೂ ಕೊರೊನಾ ಸೋಂಕು ತಗುಲಿ ಆಸ್ಪತ್ರೆ ಸೀಲ್‌ಡೌನ್ ಮಾಡಲಾಗಿದೆ.

ಬಸ್ ಚಾಲಕನಿಗೆ ತಗುಲಿರುವ ಸೋಂಕು ಇನ್ನು ಯಾರ್ಯಾರಿಗೆ ತಗುಲಿದೆ ಎಂಬುವುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಚಾಲಕನ ಪ್ರಾಥಮಿಕ ಸಂಪರ್ಕ ಹೊಂದಿದವರ ಗಂಟಲು ದ್ರವ ಪರೀಕ್ಷೆಗೆ ಸಂಗ್ರಹಿಸಲಾಗುತ್ತಿದೆ. ಹಾಗೆಯೇ ನರ್ಸ್ ಪ್ರಾಥಮಿಕ ಸಂಪರ್ಕ ಹೊಂದಿದವರ ಗಂಟಲು ದ್ರವ ಪರೀಕ್ಷೆಗೂ ಕಳುಹಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಇಡೀ ಸುರಪುರ ನಗರವೇ ಕೊರೊನಾದಿಂದ ಬೆಚ್ಚಿ ಬೀಳುವಂತಾಗಿದ್ದು, ಜನರು ಅಂಗಡಿಗಳಲ್ಲಿ ದಿನಸಿ ತೆಗೆದುಕೊಳ್ಳಲು ಮತ್ತು ಹಣ್ಣು ತರಕಾರಿ ಖರೀದಿಗೂ ಹಿಂದೇಟು ಹಾಕುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.