ETV Bharat / state

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ನಡೆದು ಬಂದ ಹಾದಿ: 189 ವರ್ಷಗಳ ಇತಿಹಾಸ, ಏನೆಲ್ಲ ಬದಲಾವಣೆ? - LALBAGH FLOWER SHOW

ಸಸ್ಯಕಾಶಿಯಲ್ಲಿ ಮೊದಲ ಬಾರಿಗೆ 1836ರಲ್ಲಿ ವಿಲಿಯಂ ಮುನ್ರೋ ನಿರ್ವಹಣೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆದಿತ್ತು. ಈ ಫಲಪುಷ್ಪ ಪ್ರದರ್ಶನದ ಕುರಿತು ಈಟಿವಿ ಭಾರತದ ಪ್ರತಿನಿಧಿ ರಮೇಶ್​ ಬನ್ನಿಕುಪ್ಪೆ ಅವರ ವಿಶೇಷ ವರದಿ.

Lal Bagh Flower Show
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ (IANS)
author img

By ETV Bharat Karnataka Team

Published : Jan 24, 2025, 6:31 PM IST

Updated : Jan 24, 2025, 7:49 PM IST

ಬೆಂಗಳೂರು: ಉದ್ಯಾನ ನಗರಿ ಎಂತಲೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಪರಿಕಲ್ಪನೆ ಚಿಗುರೊಡೆಯುವುದಕ್ಕೂ ಮುನ್ನ ಸಂಶೋಧನೆಗಾಗಿ ಆರಂಭವಾಗಿ ಮನೋರಂಜನೆಯ ಕೇಂದ್ರವಾಗಿ ಬದಲಾಗಿದೆ.

ಸುಮಾರು 189 ವರ್ಷಗಳ ಹಿಂದೆ ಭಾರತವನ್ನು ಬ್ರಿಟಿಷರು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಕೃಷಿ ಅಥವಾ ತೋಟಗಾರಿಕೆ ವಿಶ್ವವಿದ್ಯಾಲಯಗಳೂ ಇರಲಿಲ್ಲ. ಆದರೆ, ಲಾಲ್​ಬಾಗ್ ಉದ್ಯಾನವನ ತೋಟಗಾರಿಕೆಗೆ ಸಂಬಂಧಿಸಿದ ಸಂಶೋಧನೆಗಳ ಕೇಂದ್ರವಾಗಿತ್ತು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಅವರಿಂದ ಮಾಹಿತಿ (ETV Bharat)

ಲಾಲ್​ಬಾಗ್‌ನಲ್ಲಾದ ಸಂಶೋಧನೆಗಳು, ದೇಶ - ವಿದೇಶಗಳಿಂದ ತಂದು ಬೆಳೆದ ಅಪರೂಪದ ಹೂವು - ಹಣ್ಣುಗಳು, ತರಕಾರಿಗಳನ್ನು ಪರಿಚಯಿಸಲು ತೋಟಗಾರಿಕೆ ಪ್ರದರ್ಶನ (ಇಂದಿನ ಫಲಪುಷ್ಪ ಪ್ರದರ್ಶನ)ವೂ ನಡೆದು ಬಂದಿದ್ದು, ಮುಂದುವರೆದು ಇಡೀ ದೇಶದ ಗಮನ ಸೆಳೆಯಿತು. ಈ ವೀಕ್ಷಣೆಗೆ ಪ್ರಾರಂಭದಲ್ಲಿ ವಿವಿಧ ಭಾಗಗಳಿಂದ ಸಂಶೋಧಕರು, ಸಸ್ಯಶಾಸ್ತ್ರಜ್ಞರು, ವಿದ್ಯಾರ್ಥಿಗಳು ಹರಿದು ಬರುತ್ತಿದ್ದರು.

1836ರಲ್ಲಿ ಮೊದಲ ಪ್ರದರ್ಶನ: ಸಸ್ಯಕಾಶಿಯಲ್ಲಿ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನ ನಡೆದಿದ್ದು 1836ರಲ್ಲಿ. ಈ ಬಾರಿ ನಡೆಯುತ್ತಿರುವುದು 217ನೇ ಫಲಪುಷ್ಪ ಪ್ರದರ್ಶನ. ಅಂದು ಉದ್ಯಾನ ನಿರ್ವಹಣೆ ಮಾಡುತ್ತಿದ್ದವರು ವಿಲಿಯಂ ಮುನ್ರೋ. ಸತತ ನಾಲ್ಕು ವರ್ಷಗಳ ಕಾಲ ಸಾಕಷ್ಟು ಸಂಶೋಧನೆ ನಡೆಸಿ, ಉದ್ಯಾನ ಅಭಿವೃದ್ಧಿಪಡಿಸಿದ್ದರು. ಆ ವರ್ಷ ಉತ್ತಮ ಪ್ರದರ್ಶನ ಮಾಡಿದ್ದಕ್ಕೆ ಗೌರವಕ್ಕೆ ಪಾತ್ರರಾಗಿದ್ದರು.

Lal Bagh Flower Show
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ (IANS)

ಈ ನಡುವೆ ಮದ್ರಾಸ್ ಸರ್ಕಾರವು ಸೈನಿಕರಿಗೆ ಬೇಕಾಗುವ ಹಣ್ಣು-ತರಕಾರಿ ಬೆಳೆಯಲು ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಹ್ಯೂಗ್ ಕ್ಲೆಗಾರ್ನ್ ಎಂಬವರನ್ನು ಲಾಲ್‌ಬಾಗ್‌ಗೆ ನೇಮಕ ಮಾಡಿತ್ತು. ಅವರು ಲಾಲ್‌ಬಾಗ್‌ನ್ನು ಬೊಟಾನಿಕಲ್ ಗಾರ್ಡನ್ ಆಗಿ ಮೇಲ್ದರ್ಜೆಗೇರಿಸಲು ಶ್ರಮಿಸಿದ್ದರು. ಅದಾದ ನಂತರ ಇದರ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಲಂಡನ್‌ನ ಕ್ಯು ರಾಯಲ್ ಬೊಟಾನಿಕಲ್ ಗಾರ್ಡನ್‌ನಿಂದ ವಿಲಿಯಂ ನ್ಯೂ ಎಂಬ ಸಸ್ಯಶಾಸ್ತ್ರಜ್ಞನನ್ನು ಕ್ಯುರೇಟರ್ ಆಗಿ ಮಾಡಿತ್ತು. ಅವರು 1863ರಲ್ಲಿ ಬ್ಯಾಂಡ್‌ಸ್ಟ್ಯಾಂಡ್ ನಿರ್ಮಿಸಿ, ಅದರ ಸುತ್ತಲೂ ಫಲ-ಪುಷ್ಪ ಪ್ರದರ್ಶನ ಏರ್ಪಡಿಸುತ್ತಿದ್ದರು. 1867ರಿಂದ ಕ್ರಮಬದ್ಧವಾಗಿ ಈ ಪ್ರದರ್ಶನ ಆರಂಭವಾಗಿತ್ತು ಎಂಬುದಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ವರ್ಷಕ್ಕೊಮ್ಮೆ ಪ್ರದರ್ಶನ: 1873-74ರಲ್ಲಿ ಬಂದ ಕ್ಯುರೇಟರ್ ಜಾನ್ ಕ್ಯಾಮರಾನ್ ಈ ಪ್ರದರ್ಶನಕ್ಕೆ ಹೊಸ ಸ್ಪರ್ಶ ನೀಡಿದರು. ಅದು ಕೃಷಿ, ತೋಟಗಾರಿಕೆ, ಗಿಡಮೂಲಿಕೆ, ಆಹಾರ, ಪಶುಸಂಗೋಪನೆ ಸೇರಿದಂತೆ ಸಮಗ್ರವಾದ ದೃಷ್ಟಿಕೋನ ಒಳಗೊಂಡಿತ್ತು.

Lal Bagh Flower Show 2023
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ 2023 (ETV Bharat)

ಅಲ್ಲದೇ, ಅವರು ಕೃಷಿ - ತೋಟಗಾರಿಕಾ ಪ್ರದರ್ಶನ ಸಮಿತಿಯನ್ನೂ ರಚಿಸಿ ಇಂಗ್ಲೆಂಡ್ ಮಾದರಿಯಲ್ಲಿ ಇಲ್ಲಿಯೂ ವಿದೇಶಿ ಜಾತಿಯ ಗಿಡಗಳನ್ನು ಬೆಳೆಸಿ, ಸಂರಕ್ಷಿಸಲು ಮುಂದಾಗಿದ್ದರು. 1889ರಲ್ಲಿ ಮೈಸೂರು ಮಹಾರಾಜ ಚಾಮರಾಜ ಒಡೆಯರು 75 ಸಾವಿರ ಅನುದಾನ ನೀಡಿದರು. ಅದರಿಂದಲೇ ಈಗಿನ ಗಾಜಿನ ಮನೆ ನಿರ್ಮಾಣವಾಗುತ್ತದೆ.

ಈ ಗಾಜಿನ ಮನೆಯಲ್ಲಿ ಉಷ್ಣವಲಯ, ಸಮಶೀತೋಷ್ಣವಲಯದ ಗಿಡಗಳು, ಕಳ್ಳಿಜಾತಿಯ ಗಿಡಗಳು, ಗುಲಾಬಿ, ಔಷಧೀಯ ಸಸ್ಯಗಳು ಹೀಗೆ ವರ್ಗೀಕರಿಸಿ ಪ್ರದರ್ಶನಕ್ಕೆ ಇಡಲಾಗುತ್ತಿತ್ತು. ಈ ರೀತಿಯ ವರ್ಗೀಕರಣ ದೇಶದಲ್ಲಿ ಎಲ್ಲಿಯೂ ಇರಲಿಲ್ಲ. ನಂತರ ಅಂದರೆ 1908ರಲ್ಲಿ ಬಂದವರು ಕ್ರುಂಬಿಗಲ್. ಅವರು ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ಪ್ರತಿಷ್ಠಿತರ ಮನೆ ಬಾಗಿಲಿಗೆ ಕೊಂಡೊಯ್ದರು. ಅಲ್ಲದೇ, ಮೈಸೂರು ಉದ್ಯಾನ ಕಲಾ ಸಂಘ ಪ್ರಾರಂಭವಾಗಿ ಅದರ ಸಹಭಾಗಿತ್ವದಲ್ಲಿ 1912ರಿಂದ ನಿರಂತರವಾಗಿ ಈ ಸಂಘವು ಪ್ರದರ್ಶನ ನಡೆಸಿಕೊಂಡು ಬರುತ್ತಿದೆ.

Lal Bagh Flower Show 2024
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ 2024 (ETV Bharat)

ರಾಜಧಾನಿ ದೆಹಲಿಯಲ್ಲಿಯೂ ಪ್ರದರ್ಶನ: 1932ರಲ್ಲಿ ಮೊದಲ ದೇಶೀಯ ವ್ಯಕ್ತಿ ತೋಟಗಾರಿಕಾ ಅಧಿಕಾರಿಯಾಗಿ ರಾವ್ ಬಹದ್ದೂರ್ ಜವರಾಯ ಎಂಬುವರು ನೇಮಕಗೊಂಡರು. ಜತೆಗೆ, ಸಂಯುಕ್ತ ಭಾರತದ ಮುಖ್ಯ ಮಾರುಕಟ್ಟೆ ಅಧಿಕಾರಿಯಾಗಿದ್ದ ಅವರು ಲಾಲ್‌ಬಾಗ್ ಮಾದರಿಯ ಪ್ರದರ್ಶನವನ್ನು ದೆಹಲಿಗೆ ಪರಿಚಯಿಸಿದರು. ಅಲ್ಲಿಯೂ ಫಲಪುಷ್ಪ ಪ್ರದರ್ಶನ ಶುರುವಾಗಲು ಇದು ಪ್ರಮುಖ ಕಾರಣವಾಯಿತು.

1947ರಲ್ಲಿ ಡಾ.ಎಂ.ಎಚ್. ಮರಿಗೌಡ ಅವರು ಈ ಫಲಪುಷ್ಪ ಪ್ರದರ್ಶನಕ್ಕೆ ಹೊಸ ಆಯಾಮ ನೀಡಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ರೈತರು ಬೆಳೆದ ತೋಟಗಾರಿಕಾ ಬೆಳೆಗಳಿಗೂ ಈ ಪ್ರದರ್ಶನದಲ್ಲಿ ವೇದಿಕೆ ಕಲ್ಪಿಸಿದರು. ಪರಿಣಾಮ ಪ್ರತಿಷ್ಠಿತ ಮತ್ತು ಯೂರೋಪಿಯನ್‌ರಿಗೆ ಸೀಮಿತವಾಗಿದ್ದ ಪ್ರದರ್ಶನವನ್ನು ವರ್ಷದಲ್ಲಿ ಎರಡು ಬಾರಿ ಆಯೋಜಿಸಿ ಸಾಮಾನ್ಯ ವರ್ಗವೂ ಭಾಗಿಯಾಗುವಂತೆ ಅವಕಾಶ ಮಾಡಿಕೊಟ್ಟಿದ್ದರು.

Lal Bagh Flower Show
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ (IANS)

ಸಂಶೋಧನಾ ಕೇಂದ್ರ ಮನೋರಂಜನೆಗೆ ಸೀಮಿತ: ಹೊಸ ಆವಿಷ್ಕಾರಗಳ ಮೂಲಕ ಹೊರಬರುತ್ತಿದ್ದ ಫಲಪುಷ್ಪ ಪ್ರದರ್ಶನದ ಮೂಲ ಪರಿಕಲ್ಪನೆಯೇ ಇಂದು ಬದಲಾಗುತ್ತಿದೆ. ವೈವಿಧ್ಯತೆಯಿಂದ ಏಕತಾನತೆಯತ್ತ ಮುಖಮಾಡುತ್ತಿದೆ. ಸಂಶೋಧನೆ ಮತ್ತು ಶಾಸ್ತ್ರೀಯತೆ ಬದಲಿಗೆ ಸ್ಮಾರಕಕ್ಕೆ ಸೀಮಿತವಾಗುತ್ತಿದೆ. ಇದರಿಂದ ಭೇಟಿ ನೀಡುವವರ ಸಂಖ್ಯೆ ಮತ್ತು ಆದಾಯ ಹೆಚ್ಚಾಗಿರಬಹುದು. ಸಂಶೋಧನಾ ಕೇಂದ್ರದಿಂದ ಮನರಂಜನೆಯ ತಾಣವಾಗುತ್ತಿದೆ.

ಬದಲಾದ ಪರಿಕಲ್ಪನೆ: 2000ದಿಂದ ನಂತರದ ದಿನಗಳಿಂದ ಫಲಪುಷ್ಪ ಪ್ರದರ್ಶನದ ಪರಿಕಲ್ಪನೆ ಬದಲಾಯಿಸಲಾಯಿತು. ಒಂದೊಂದು ವಿಷಯ ವಸ್ತುಗಳನ್ನಿಟ್ಟುಕೊಂಡು ಜನಾಕರ್ಷಣೆಗೆ ಒತ್ತುಕೊಡಲು ಪ್ರಾರಂಭಿಸಲಾಯಿತು. ಒಂದೇ ರೀತಿಯ ಹೂವುಗಳಿಂದ ಅಲಂಕರಿಸಿದ ಸ್ಮಾರಕಗಳನ್ನು ನಿರ್ಮಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಇದರಿಂದ ಸಂಶೋಧನೆಯ ಬದಲಾಗಿ ಮನೋರಂಜನೆಗೆ ಹೆಚ್ಚು ಆಸಕ್ತಿಯ ತಾಣವಾಗಿ ಪ್ರಾರಂಭವಾಯಿತು.

Lal Bagh Flower Show 2022
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ 2022 (ETV Bharat)

ಇವೆಂಟ್ ಮ್ಯಾನೇಜ್‌ಮೆಂಟ್ ಪ್ರವೇಶ: ಮೈಸೂರು ಉದ್ಯಾನಕಲಾ ಸಂಘ ಆರಂಭವಾದ ದಿನಗಳಿಂದ ಹಲವು ವರ್ಷಗಳ ಕಾಲ ಕಡಿಮೆ ಬೆಲೆಯಲ್ಲೇ ಫಲಪುಷ್ಪ ಪ್ರದರ್ಶನ ಅಣಿಯಾಗುತ್ತಿತ್ತು. ತೋಗಾರಿಕಾ ಬೆಳೆಗಳ ಬಗ್ಗೆಯೂ ನೋಡುಗರಿಗೆ ಒಂದು ರೀತಿ ಕೃಷಿ ಶಿಕ್ಷಣ ಇರುತ್ತಿತ್ತು. ಪ್ರದರ್ಶನ ವೀಕ್ಷಿಸುತ್ತಿದ್ದ ರೈತರು ಈ ರೀತಿಯ ಪ್ರಯೋಗಗಳನ್ನು ತಮ್ಮ ತೋಟದಲ್ಲೂ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪ್ರದರ್ಶನಕ್ಕಾಗಿಯೇ ‘ಇವೆಂಟ್ ಮ್ಯಾನೇಜರ್’ ಇದ್ದಾರೆ. ಡೆಕೋರೇಟರ್‌ಗಳ ಜತಗೆ ಪ್ರಾಯೋಜಕರೂ ಆಗಮಿಸಿದ್ದಾರೆ. ಹೀಗಾಗಿ, ರೈತರಿಗೆ ಕೃಷಿ ಶಿಕ್ಷಣ ನೀಡಬೇಕಾಗಿದ್ದ ಫಲಪುಷ್ಪ ಪ್ರದರ್ಶನ ಈಗ ಶಿಕ್ಷಣದ ಬದಲಿಗೆ ಪ್ರವಾಸಿಗರಿಗೆ ಮನಂರಜನೆ ನೀಡುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ.ಗಳನ್ನು ವೆಚ್ಚ ಮಾಡುತ್ತಿದ್ದು, ಅದರಿಂದ ಹೆಚ್ಚಿನ ಪ್ರಮಾಣದ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ತಜ್ಞ ಡಾ.ಹಿತ್ತಲಮನಿ ವಿವರಿಸಿದರು.

1 ರೂ.ನಿಂದ 100 ರೂ.ವರೆಗೆ ಶುಲ್ಕ: ಪ್ರಾರಂಭದ ದಿನಗಳಲ್ಲಿ ಫಲಪುಷ್ಪ ಪ್ರದರ್ಶನ 1 ರೂ. ಇತ್ತು. ಈಗ ಅದರ ಬೆಲೆ 80ರಿಂದ 100 ರೂ.ಗೆ ಬಂದು ನಿಂತಿದೆ. ಫಲಪುಷ್ಪ ಪ್ರದರ್ಶನಕ್ಕೆ ಕೋಟ್ಯಾಂತರ ಹಣ ಚೆಲ್ಲಿ, ಅದೇ ರೀತಿಯಲ್ಲೇ ಹಣ ಪಡೆಯಲಾಗುತ್ತದೆ. ಈ ಹಿಂದೆ ಫಲಪುಷ್ಪ ಪ್ರದರ್ಶನವನ್ನು ಕೊಟ್ಯಂತರ ರೂ. ವೆಚ್ಚದಲ್ಲಿ ಆಯೋಜಿಸುತ್ತಿದ್ದು, ಅದರಿಂದ ಲಾಭವನ್ನು ಗಳಿಸಲಾಗುತ್ತಿದೆ. 2025ರ ಜನವರಿ ಫಲಪುಷ್ಪ ಪ್ರದರ್ಶನಕ್ಕೆ 2.75 ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ. ಸುಮಾರು 10 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು, 3 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿರುವುದಾಗಿ ತೋಟಗಾರಿಕಾ ಇಲಾಖೆಯ ನಿರ್ದೇಶಕ ರಮೇಶ್ ಮಾಹಿತಿ ನೀಡಿದರು.

Lal Bagh Flower Show
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ (ETV Bharat)

ಪ್ರಾರಂಭದಿಂದ 8 ಪ್ರದರ್ಶನ ರದ್ದು: ಸಾಂಕ್ರಾಮಿಕ ಪಿಡುಗಾದಂತಹ ಪ್ಲೇಗ್​ ಕಾಯಿಲೆ ಹರಡಿದ ಸಂದರ್ಭದಲ್ಲಿ ಮೂರು ಅವಧಿಯ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ಬಳಿಕ ಡಾ.ರಾಜ್​ಕುಮಾರ್​ ಅಪಹರಣ ಸಂದರ್ಭದಲ್ಲಿ ಎರಡು ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ಮತ್ತು ಕೊರೋನಾ ಸಾಂಕ್ರಾಮಿಕ ರೋಗ ಬಂದ ಸಂದರ್ಭದಲ್ಲಿಯೂ ಮೂರು ಪ್ರದರ್ಶನಗಳನ್ನು ರದ್ದು ಮಾಡಲಾಗಿತ್ತು. ಇನ್ನುಳಿದಂತೆ ಪ್ರತಿ ಅವಧಿಯಲ್ಲಿಯೂ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ರೈತರು ಮತ್ತು ಯುವ ಜನಾಂಗಕ್ಕೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ವಿವರಿಸಿದರು.

ಪ್ರಯೋಗ ಶಾಲೆಯಾಗಿದ್ದ ಲಾಲ್​ಬಾಗ್​: 1856 ಸಪೋಟಾ, ಸೀಮೆ ಬದನೆಕಾಯಿ ನಮ್ಮ ಕಾಲದಲ್ಲಿ ಇರಲಿಲ್ಲ. ಈ ಹಣ್ಣಿನ ಮೇಳಗಳನ್ನು ಮಾಡುವ ಮೂಲಕ ಜನರಿಗೆ ತಿಳಿಸುವ ಕಾರ್ಯ ನಡೆಯುತ್ತಿತ್ತು. ಆ ರೀತಿಯ ಹಣ್ಣುಗಳು ಏನು ಮಾಡಬೇಕು ಎಂಬುದರ ಕುರಿತು ನಮ್ಮ ಜನರಿಗೆ ಮಾಹಿತಿ ನೀಡುವ ಕಾರ್ಯ ನಡೆಯುತ್ತಿತ್ತು.

ರಾಜ್ಯ ತೋಟಗಾರಿಕೆ ಇಲಾಖೆಗೆ ಮರಿಗೌಡ ಅವರು ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ರಾಜ್ಯ ಸುಮಾರು 400 ಇಲಾಖೆಗಳ ವತಿಯಿಂದ ತೋಟಗಳನ್ನು ಪ್ರಾರಂಭಿಸಲಾಗಿತ್ತು. ಅಲ್ಲದೇ, ಲಾಲ್​ಬಾಗ್​ನಲ್ಲಿ ಹಣ್ಣುಗಳ ಗಿಡಗಳನ್ನು ಬೆಳೆಸಿ ಬಳಿಕ ಅಲ್ಲಿಂದ ಇತರೆ 400 ತೋಟಗಳಿಗೂ ಕಳಿಸಿ ಅಲ್ಲಿನ ರೈತರಿಗೆ ಸಲ್ಲಿಸುವ ಕಾರ್ಯ ನಡೆದಿತ್ತು. ಇದಕ್ಕಾಗಿ ಲಾಲ್​ಬಾಗ್​ ಒಂದು ಪ್ರಯೋಗ ಶಾಲೆಯಾಗಿತ್ತು ಎಂದು ವಿವರಿಸಿದರು.

ಪ್ರಾರಂಭದಲ್ಲಿ ಅಲಂಕಾರಿಕ ಮತ್ತು ಉದ್ಯಾನ ಸಸ್ಯಗಳು, ತೋಟಗಾರಿಕೆ ಮತ್ತು ಔಷದೀಯ ಬೆಳಗಳನ್ನು ಬೆಳೆದು ಪ್ರದರ್ಶನ ಮಾಡಿ ಅವರಿಗೆ ಬಹುಮಾನ ನೀಡಿ ಉತ್ತೇಜನ ನೀಡುವುದಾಗಿತ್ತು.

ಅತ್ಯಂತ ಜನಪ್ರಿಯತೆಗೆಯಿಂದ ಇತರೆಡೆಗಳಿಗೂ ಹರಡಿದೆ: ಪ್ರಾರಂಭದಲ್ಲಿ ದೆಹಲಿ, ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಪ್ರದರ್ಶನಗಳಿಂದ ಆಗುತ್ತಿರುವ ಜನಪ್ರಿಯತೆ ಮತ್ತು ಮಾಹಿತಿಯಿಂದಾಗಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದು ವಿವರಿಸಿದರು.

Lal Bagh Flower Show
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ (IANS)

ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದ ಹೂವುಗಳ ಬಳಕೆ: ಫಲಪುಷ್ಪ ಪ್ರದರ್ಶನಕ್ಕೆ 85ಕ್ಕೂ ಹೆಚ್ಚು ವಿವಿಧ ವಾರ್ಷಿಕ ಹೂವುಗಳನ್ನು ಬಳಕೆ ಮಾಡಲಾಗುತ್ತದೆ. ಈ ಹೂವುಗಳನ್ನು ಊಟಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬೆಟ್ಟ ಪ್ರದೇಶಗಳಿಂದ ತರಿಸಿಕೊಳ್ಳಲಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ ಸೇವಂತಿಗೆ, ಗುಲಾಬಿ, ಆರ್ಕಿಡ್ಸ್ ವಿವಿಧ ವರ್ಣ ಪಾಯಿನ್ಸಿಟಿಯಾ, ಪೆಂಟಾಸ್ ಕಾರ್ನಿಯಾ ಬ್ರೋಮಿಲಿಯಾಯ್ದ, ಟ್ಯೂಬಿರೋಸ್‌ರೋಟೆಡ್ ಬಿಗೋನಿಯಾ, ಸಿಲೋಷಿಯಾ, ಸ್ವಾಟಿಸ್ ಇತ್ಯಾದಿಯಾಗಿವೆ.

10 ದಿನಗಳ ಪ್ರದರ್ಶನಕ್ಕೆ ತಂಪು ಫಾಗರ್ಸ್: ಗಾಜಿನ ಮನೆಯಲ್ಲಿ 10 ದಿನಗಳ ಕಾಲ ಫಲ ಪುಷ್ಪ ಪ್ರದರ್ಶನ ನಡೆಯುತ್ತದೆ. ಈ ಹತ್ತು ದಿನಗಳಲ್ಲಿ ಎರಡು ಬಾರಿ ಎಲ್ಲ ಹೂವುಗಳನ್ನು ಬದಲಾವಣೆ ಮಾಡಲಾಗುತ್ತದೆ. ಈ ಐದು ದಿನಗಳ ಕಾಲ ಹೂವುಗಳನ್ನು ತಂಪಾಗಿಡುವುದು, ಜನದಟ್ಟಣೆಯ ಧೂಳಿನಿಂದ ಹೂವುಗಳು ಮಂಕಾಗುವುದರ ಜತೆಗೆ ಬಹುಬೇಗ ಬಾಡುತ್ತವೆ. ಹೀಗಾಗಿ ಗಾಜಿನ ಮನೆಗೆ ಭೇಟಿ ನೀಡುವ ವೀಕ್ಷಕರಿಗಾಗಿ ಮಂಜಿನ ವಾತಾವರಣ ಉಂಟು ಮಾಡುವ ವ್ಯವಸ್ಥೆ ಮಾಡಲಾಗಿರುತ್ತದೆ. ಇದಕ್ಕಾಗಿ ಇಸ್ರೇಲ್‌ನ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ವ್ಯವಸ್ಥಿತ ಮಿಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಡಾ.ಜಗದೀಶ್ ವಿವರಿಸಿದರು.

ಇದನ್ನೂ ಓದಿ: ಲಾಲ್​ಬಾಗ್​ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಮಹರ್ಷಿ ವಾಲ್ಮೀಕಿ ಪ್ರತಿಕೃತಿ ಪ್ರಮುಖ ಆಕರ್ಷಣೆ; ಟಿಕೆಟ್ ಖರೀದಿಗೆ ಕ್ಯೂಆರ್​ ಕೋಡ್​ ಬಳಕೆ

Last Updated : Jan 24, 2025, 7:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.