ಯಾದಗಿರಿ : ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಾಗಿದ್ದ ಜಿಲ್ಲೆಯ ವಿದ್ಯಾರ್ಥಿ ಒಬ್ಬನಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಬಾಲಕನ ಮನವೊಲಿಸುವ ಮೂಲಕ ವೈದ್ಯರ ತಂಡ ಆತನನ್ನ ಕೋವಿಡ್ ಕೇರ್ ಸೆಂಟರ್ಗೆ ಸಿಫ್ಟ್ ಮಾಡಿದ್ದಾರೆ.
ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ 16 ವರ್ಷದ ಬಾಲಕ (ಪಿ 10201) ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಜೂನ್ 22 ರಂದು ಮಹರಾಷ್ಟ್ರದಿಂದ ಈ ಬಾಲಕ ಯಾದಗಿರಿ ಜಿಲ್ಲೆಗೆ ಬಂದಿದ್ದ. ವಾಪಸ್ ಆದ ಬಾಲಕನನ್ನ ವಡಗೇರಾ ಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಆ ವೇಳೆ ಆತನ ಗಂಟಲ ದ್ರವ, ರಕ್ತ ಮಾದರಿಯನ್ನ ಕೋವಿಡ್ 19 ಲ್ಯಾಬ್ಗೆ ಕಳುಹಿಸಲಾಗಿತ್ತು. ವರದಿಯಲ್ಲಿ ವಿದ್ಯಾರ್ಥಿಗೆ ಪಾಸಿಟಿವ್ ಬಂದಿದೆ.
ಸೋಂಕು ತಗುಲಿದ ಬಾಲಕ ಪರೀಕ್ಷೆ ಬರೆಯಲು ಮುಂದಾಗಿದ್ದ. ಈ ಹಿನ್ನೆಲೆ ವೈದ್ಯಾಧಿಕಾರಿ ಡಾ. ಯಶವಂತ ಅವರ ತಂಡ ಆತನ ಮನವಲಿಸುಲ್ಲಿ ಯಶಸ್ವಿಯಾಗಿದ್ದು, ಪೂರಕ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಡಲಾಗುವದು ಎಂದು ಜಿಲ್ಲಾಡಳಿತ ಬರವಸೆ ನೀಡಿದೆ.