ETV Bharat / state

ಯಾದಗಿರಿ: ಮೂರು ಜನ ಕೊರೊನಾ ವಾರಿಯರ್ಸ್​ಗೆ ಕೊರೊನಾ ಸೋಂಕು - ಯಾದಗಿರಿ ಕೊರೊನಾ ವಾರಿಯರ್ಸ್​

ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

Yadagiri
Yadagiri
author img

By

Published : Jun 19, 2020, 3:19 PM IST

ಯಾದಗಿರಿ: ಇಷ್ಟು ದಿನ ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸ್ ಆದ ವಲಸಿಗರಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹಾಮಾರಿ ಕೊರೊನಾ ವೈರಸ್, ಇದೀಗ ಮೂರು ಜನ ಕೊರೊನಾ ವಾರಿಯರ್ಸ್​ಗೆ ವಕ್ಕರಿಸಿದೆ.

ಯಾದಗಿರಿ ನಗರದ ಕಂಟೈನ್​ಮೆಂಟ್​ ಝೋನ್ ನಲ್ಲಿ ಕೆಲಸ ಮಾಡಿದ ಅಂಗನವಾಡಿ ಸಹಾಯಕಿ ಸೇರಿದಂತೆ ಹೋಮ್ ಕ್ವಾರಂಟೈನ್​ನಲ್ಲಿದ್ದ ವಲಸೆ ಕಾರ್ಮಿಕರ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿದ್ದ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರಿಗೆ ಈಗ ಸೋಂಕು ದೃಢಪಟ್ಟಿದೆ.

ಆರೋಗ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಈ ಮೂರು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ದುಕನವಾಡಿ ಕಂಟೈನ್​ಮೆಂಟ್​ ಝೋನ್ ಅಂಗನವಾಡಿ ಸಹಾಯಕಿ ಪಿ 7894 ಜೊತೆಗೆ ಜಿಲ್ಲೆಯ ಸುರಪುರ ತಾಲೂಕಿನ ದಿವಳಗುಡ್ಡ ಗ್ರಾಮದಲ್ಲಿ ಹೋಮ್ ಕ್ವಾರಂಟೈನ್​ ಆಗಿದ್ದ ಮಹರಾಷ್ಟ್ರದ ವಲಸಿಗರ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ 7895 ಮತ್ತು ಪಿ ನಂ 7896 ಅಂಗನವಾಡಿ ಕರ್ಯಕರ್ತೆಯರಿಗೆ ಕಿಲ್ಲರ್ ಕೊರೊನಾ ವಕ್ಕರಿಸಿದೆ.

ಇದೀಗ ಸೋಂಕು ತಗುಲಿದವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ತೊಡಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.