ಯಾದಗಿರಿ: ಸುರಪುರ ತಾಲೂಕಿನಲ್ಲಿ ಲಕ್ಷಾಂತರ ಕ್ವಿಂಟಾಲ್ ಭತ್ತ ಬೆಳೆದ ರೈತರು ಪ್ರತಿ ವರ್ಷ ಈ ಸಮಯಕ್ಕೆ ಭತ್ತ ಮಾರಾಟ ಮಾಡಿ ಆರಾಮಾಗಿರುತ್ತಿದ್ಧರು. ಆದರೆ ಈ ವರ್ಷ ಕೊರೊನಾದಿಂದಾಗಿ ಖರೀದಿದಾರರು ಬರುತ್ತಿಲ್ಲ. ಹೀಗಾಗಿ ಕಂಗಾಲಾಗಿದ್ದಾರೆ.
ಈಗಾಗಲೇ ಎರಡು ಬಾರಿ ತಾಲೂಕಿನಲ್ಲಿ ಅಕಾಲಿಕವಾಗಿ ಸುರಿದ ಮಳೆ ರೈತರಲ್ಲಿ ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ. ರಸ್ತೆ ಪಕ್ಕದಲ್ಲಿ, ಬಯಲು ಪ್ರದೇಶದಲ್ಲಿ ಎಲ್ಲೆಂದರಲ್ಲಿ ಹಾಕಿರುವ ಭತ್ತ ಮಳೆ ಬಂದರೆ ತೊಯ್ದು ಹಾಳಾಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಸುಮಾರು 22ರಿಂದ 25 ಸಾವಿರ ರೂಪಾಯಿಗಳವರೆಗೆ ಖರ್ಚು ಮಾಡಿರುವ ರೈತ, ಒಳ್ಳೆಯ ಬೆಲೆ ನಿರೀಕ್ಷಿಸುತ್ತಿದ್ದಾನೆ.
ಸರ್ಕಾರ ಉತ್ತಮ ಬೆಲೆಗೆ ಭತ್ತ ಖರೀದಿಸಬೇಕು. ಇಲ್ಲವಾದರೆ ನಮಗೆ ಸಾವೇ ಗತಿಯಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.