ಗುರುಮಠಕಲ್ (ಯಾದಗಿರಿ): ಕಲ್ಯಾಣ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಶಕ್ತಿ ಕೇಂದ್ರವಾದ ತಾಲೂಕಿನ ಚಿಂತನಹಳ್ಳಿಯ ಗವಿಸಿದ್ಧಲಿಂಗೇಶ್ವರ ರಥೋತ್ಸವವು ವಿಜೃಂಭಣೆಯಿಂದ ಜರುಗಿದೆ.
ರಾತ್ರಿ ಎಲ್ಹೇರಿ ಮಳಖೇಡ ಮಠದ ಪುಜ್ಯರಾದ ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರು ರಥಕ್ಕೆ ಪೂಜೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಇಲ್ಲಿನ ಆರಾಧ್ಯದೈವ ಗವಿಸಿದ್ಧಲಿಂಗೇಶ್ವರನಿಗೆ ವೇದಘೋಷಗಳೊಂದಿಗೆ ಅರ್ಚಕರು ಮಹಾರುದ್ರಾಭಿಷೇಕ ನೆರವೇರಿಸಿದರು.
ನಂತರ ಸಹಸ್ರ ಬಿಲ್ವಾರ್ಚನೆ ನಡೆಸಿ, ದೇವರ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಯನ್ನು ಚಿಂತನಹಳ್ಳಿ ಗ್ರಾಮದಿಂದ ಕಾನನದ ಮಧ್ಯೆ ಇರುವ ಗವಿ ಸಿದ್ಧಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಸಾವಿರಾರು ಮಂದಿ ಭಕ್ತರು ರಸ್ತೆಯಲ್ಲಿ ಜಮಾಯಿಸಿ ರಥೋತ್ಸವ ಕಣ್ತುಂಬಿಕೊಂಡರು.
ಇದನ್ನೂ ಓದಿ: ಗಗನಕ್ಕೇರಿದ ಇಂಧನ ಬೆಲೆ : ಸಿಟಿ ಬಸ್ಗಳ ಮೊರೆ ಹೋದ ಬಿಸಿಲೂರ ಜನತೆ