ಸುರಪುರ: ಮೂವರು ಪ್ರಯಾಣಿಸುತ್ತಿದ್ದ ಕಾರೊಂದು ಕಾಲುವೆಗೆ ಉರುಳಿಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಉಳಿದಿಬ್ಬರು ನಾಪತ್ತೆಯಾಗಿರುವ ಘಟನೆ ಹುಣಸಗಿ ತಾಲೂಕಿನ ಇಸ್ಲಾಮ್ಪುರ್ ಬಳಿ ನಡೆದಿದೆ.
ಅಪಘಾತಕ್ಕೀಡದವರು ಹುಣಸಗಿ ಪಟ್ಟಣದ ನಿವಾಸಿಗಳು ಎನ್ನಲಾಗಿದೆ. ಕೆಂಭಾವಿ ಹುಣಸಗಿ ಹೆದ್ದಾರಿಯಲ್ಲಿ ಬರುವ ಕೃಷ್ಣ ಮೇಲ್ದಂಡೆ ಕಾಲುವೆಯ ಪಕ್ಕದಲ್ಲಿ ಬರುತ್ತಿದ್ದ ಕಾರು ಆಯ ತಪ್ಪಿ ಉರುಳಿ ಬಿದ್ದಿದೆ. ಪರಿಣಾಮ ಒರ್ವ ಸಾವನಪ್ಪಿದ್ದು, ಶವವನ್ನು ಹೊರತೆಗೆಯಲಾಗಿದೆ. ಉಳಿದಿಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಹುಣಸಗಿ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.