ETV Bharat / state

ತೆಲಂಗಾಣದಲ್ಲಿ ಕರ್ನಾಟಕದ ಬಸ್​​ ಪಲ್ಟಿ: 15ಕ್ಕೂ ಮಂದಿಗೆ ಗಾಯ, ಚಾಲಕ ಪರಾರಿ - bus accident in yadgiri

ಗುರುಮಠಕಲ್​‌ನಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಸೇಡಂ ಬಸ್ ಡಿಪೋದ ಚಾಲಕನ ಬೇಜವಾಬ್ದಾರಿಯಿಂದಾಗಿ ಪಲ್ಟಿಯಾಗಿದ್ದು, ಸುಮಾರು 15 ಮಂದಿಗೆ ಗಾಯವಾಗಿದೆ.

accident in telangana yadgiri border
ಯಾದಗಿರಿ ತೆಲಣಂಗಾಣ ಗಡಿಯಲ್ಲಿ ಬಸ್​ ಅಪಘಾತ
author img

By

Published : Dec 4, 2021, 11:59 AM IST

Updated : Dec 4, 2021, 12:23 PM IST

ಗುರುಮಠಕಲ್​​(ಯಾದಗಿರಿ): ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕ ವೇಗವಾಗಿ ಬಸ್ ಚಾಲನೆ ಮಾಡಿದ ಪರಿಣಾಮ ಬಸ್ ಪಲ್ಟಿಯಾಗಿದ್ದು, 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಗಾಯಗೊಂಡವರನ್ನು ತೆಲಂಗಾಣದ ನಾರಾಯಣಪೇಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಯಾದಗಿರಿ ಗಡಿಭಾಗವಾದ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಯತ್ಲಾಸಪುರ ಗ್ರಾಮದ ಸಮೀಪದ ಲೋಕಪಲ್ಲಿ ಬಳಿ ದುರ್ಘಟನೆ ಸಂಭವಿಸಿದೆ. ಕಲಬುರಗಿ ಜಿಲ್ಲೆಯ ಸೇಡಂ ಡಿಪೋದ ಬಸ್ ಗುರುಮಠಕಲ್​‌ನಿಂದ ಬೆಳಗ್ಗೆ ಹೈದರಾಬಾದ್​​ಗೆ ತೆರಳುತ್ತಿತ್ತು. ಲೋಕಪಲ್ಲಿ ರಸ್ತೆ ತಿರುವಿನಲ್ಲಿ ಚಾಲಕ ವೇಗವಾಗಿ ಬಸ್ ಚಾಲನೆ ಮಾಡಿದ ಪರಿಣಾಮ ಬಸ್ ಪಲ್ಟಿಯಾಗಿದೆ. ಚಾಲಕ ಹಾಗೂ ನಿರ್ವಾಹಕ ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ.

ತೆಲಂಗಾಣದಲ್ಲಿ ಕರ್ನಾಟಕದ ಬಸ್​​ ಪಲ್ಟಿ

ಇದನ್ನೂ ಓದಿ: ನೆಲಮಂಗಲ : ತಮ್ಮ ನೆಚ್ಚಿನ ಶಿಕ್ಷಕರು ವರ್ಗಾವಣೆಯಾಗಿದ್ದಕ್ಕೆ ಕಣ್ಣೀರು ಹಾಕಿದ ವಿದ್ಯಾರ್ಥಿಗಳು

ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ. ಚಾಲಕನ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನಾರಾಯಣಪೇಟೆ ಪೊಲೀಸರು ಹಾಗೂ ಗುರುಮಠಕಲ್ ಬಸ್ ಡಿಪೋದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Dec 4, 2021, 12:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.