ಯಾದಗಿರಿ : ಕಾಂಗ್ರೆಸ್ನವರ ಕಾಲದಲ್ಲಾದ ಹಗರಣಗಳ ಬಗ್ಗೆ ದಾಖಲೆ ನೀಡುತ್ತೇನೆ ಅಂತ ಹೇಳಿದ್ದೇನೆ ಅವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಅವರು ಒಪ್ಪದಿದ್ದರೂ ತನಿಖೆ ಮಾಡುತ್ತೇವೆ. ಕಾಂಗ್ರೆಸ್ನವರು ಬಡವರ ಹೆಸರಿನಲ್ಲಿ ದುಡ್ಡು ಹೊಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯ ಜನಸಂಕಲ್ಪಯಾತ್ರೆ ಇಂದು ಗಿರಿನಾಡು ಯಾದಗಿರಿ ಜಿಲ್ಲೆಗೆ ಲಗ್ಗೆ ಇಟ್ಟಿತ್ತು. ಅಮರೇಶ್ವರ ಕಾಲೇಜು ಮೈದಾನದಲ್ಲಿ ನಡೆದ ಸಮ್ಮೇಳನದಲ್ಲಿ ಕೈ ನಾಯಕರ ವಿರುದ್ಧ ಕಿಡಿಕಾರುತ್ತಲೇ ಬೊಮ್ಮಾಯಿ ಅವರು ಭಾಷಣ ಆರಂಭಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ನಂಜುಂಡಪ್ಪ ವರದಿ ಧೂಳು ಹಿಡಿಯುತ್ತಿತ್ತು.
ಆ ವರದಿ ಈ ಭಾಗಕ್ಕೆ ಹಿಂದುಳಿದ ತಾಲೂಕು ಎಂದು ಘೋಷಿಸಿ ಅನುದಾನಕ್ಕೆ ಸೂಚಿಸಲಾಗಿತ್ತು. ಆದರೆ, ಐದು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಸರಿಯಾಗಿ ಅನುದಾನ ಬಾರದೇ ಮತ್ತಷ್ಟು ಈ ಪ್ರದೇಶ ಹಿಂದುಳಿಯುವಂತಾಯಿತು ಎಂದು ದೂರಿದರು.
ಇದೇ ವೇಳೆ ಮಾತಾನಾಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು, ರಾಜುಗೌಡ ನಮ್ಮ ಸಹೋದರ ಅವರು ನುಡಿದಂತೆ ನಡೆಯುವ ವ್ಯಕ್ತಿ, ಮತ್ತೆ ಶಾಸಕ ರಾಜುಗೌಡ ಅವರನ್ನು ಗೆಲ್ಲಿಸಿ ತರಬೇಕು. ಮುಂದಿನ ದಿನಗಳಲ್ಲಿ ಕಲ್ಯಾಣ ರಾಜ್ಯ ಆಗಬೇಕು ಅಂದರೆ 2023ರ ಚುನಾವಣೆಯಲ್ಲಿ 150 ಸ್ಥಾನದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಎಸ್ಟಿ ಸಮುದಾಯದ ಭವಿಷ್ಯದ ನಾಯಕ ರಾಜುಗೌಡ ಎಂದ ಸಿಎಂ, ಈ ಭಾಗದ ಜನರ ಬಹು ಕನಸಾಗಿದ್ದ ಎಸ್ಟಿ ಮಿಸಲಾತಿಯನ್ನು ನೀಡಿ ನಮ್ಮ ಸರ್ಕಾರ ಸಾಧನೆ ಮಾಡಿದೆ ಎಂದರು.
ಇದನ್ನೂ ಓದಿ : ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪವಾಗಿ ಪರಿವರ್ತನೆ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ