ETV Bharat / state

ಠಾಣೆಯಲ್ಲೇ ಪಿಎಸ್​ಐ ಹುಟ್ಟುಹಬ್ಬ: ಕೊರೊನಾತಂಕದಲ್ಲಿರುವ ಸಾರ್ವಜನಿಕರ ಆಕ್ರೋಶ - Police Station in Yadgir

ಪಿಎಸ್ಐ ಸೌಮ್ಯ ಅವರ ಹುಟ್ಟು ಹಬ್ಬವನ್ನು ನಿನ್ನೆ ರಾತ್ರಿ ಪೊಲೀಸ್​ ಠಾಣೆಯಲ್ಲಿಯೇ ಆಚರಿಸಲಾಗಿದೆ. ಆ ವೇಳೆ ಹಲವಾರು ಸಾರ್ವಜನಿಕರು ಭಾಗಿಯಾಗಿದ್ದು, ಸಾಮಾಜಿಕ ಅಂತರ ಉಲ್ಲಂಘನೆ ಮಾಡಿದ್ದಾರೆ.

Birthday celebration in Police Station in Yadgir
ಠಾಣೆಯಲ್ಲೇ ಪಿಎಸ್​ಐ ಓರ್ವರ ಅದ್ಧೂರಿ ಜನ್ಮದಿನಾಚರಣೆ ಠಾಣೆಯಲ್ಲೇ ಪಿಎಸ್​ಐ ಓರ್ವರ ಅದ್ಧೂರಿ ಜನ್ಮದಿನಾಚರಣೆ
author img

By

Published : Aug 3, 2020, 3:47 PM IST

ಯಾದಗಿರಿ: ನೂರಾರು ಜನರ ಸಮ್ಮುಖದಲ್ಲಿ, ಠಾಣೆಯಲ್ಲಿಯೇ ನಡೆದ ಪಿಎಸ್ಐ ಒಬ್ಬರ ಜನ್ಮದಿನದ ಸಂಭ್ರಮಾಚರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರ ಠಾಣೆಯ ಪಿಎಸ್ಐ ಸೌಮ್ಯ ಅವರ ಹುಟ್ಟು ಹಬ್ಬವನ್ನು ನಿನ್ನೆ ರಾತ್ರಿ ಪೊಲೀಸ್​ ಠಾಣೆಯಲ್ಲಿಯೇ ಆಚರಿಸಲಾಗಿದೆ. ಪಿಎಸ್ಐ ಜನ್ಮದಿನದ ಸಂಭ್ರಮಚರಣೆಯಲ್ಲಿ ನೂರಾರು ಜನ ಭಾಗಿಯಾಗಿದ್ದಾರೆ. ಆ ವೇಳೆ ಕೆಲವರು ಮಾಸ್ಕ್ ಕೂಡ ಧರಿಸದೆ, ಸಾಮಾಜಿಕ ಅಂತರ ಉಲ್ಲಂಘಿಸಿದ್ದು, ಈ ಘಟನೆ ಸಾರ್ವಜನಿಕರ ಕಂಗಣ್ಣಿಗೆ ಕಾರಣವಾಗಿದೆ.

ಠಾಣೆಯಲ್ಲೇ ಪಿಎಸ್​ಐ ಓರ್ವರ ಅದ್ಧೂರಿ ಜನ್ಮದಿನಾಚರಣೆ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಈಗಾಗಲೇ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ವೈರಸ್​ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್​ ಇಲಾಖೆ ಸಾಕಷ್ಟು ಶ್ರಮ ವಹಿಸಿತ್ತು. ಆದರೆ, ನಿನ್ನೆ ನಡೆದ ನಗರ ಠಾಣೆ ಪಿಎಸ್ಐ ಜನ್ಮದಿನ ಸಂಭ್ರಮಾಚರಣೆಯಿಂದ ಕೊರೊನಾ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.