ಸುರಪುರ : ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬಿದ್ದಿದ್ದ ದೊಡ್ಡ ಗುಂಡಿಯ ಕುರಿತು ಈಟಿವಿ ಭಾರತ ಸುದ್ದಿ ಪ್ರಸಾರ ಮಾಡಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆದಿದೆ.
ಇಂದು ಮಧ್ಯಾಹ್ನ ಸುದ್ದಿ ಪ್ರಸಾರವಾಗಿದ್ದನ್ನು ಗಮನಿಸಿದ ಶಾಸಕ ನರಸಿಂಹ ನಾಯಕ (ರಾಜುಗೌಡ) ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿ ಖಡಕ್ಕಾಗಿ ವಾರ್ನ್ ಮಾಡಿ ಸಂಜೆಯ ವೇಳೆಗೆ ರಸ್ತೆ ದುರಸ್ಥಿ ಮಾಡುವಂತೆ ತಾಕೀತು ಮಾಡಿದ್ದಾರೆ.
ಶಾಸಕರ ಖಡಕ್ ಎಚ್ಚರಿಕೆಗೆ ಕಾರ್ಯಪ್ರವೃತ್ತರಾದ ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಕಂಕರ್ ಮತ್ತು ಜೆಸಿಬಿಗಳ ಜೊತೆಗೆ ಸ್ಥಳಕ್ಕೆ ಬಂದು ರಸ್ತೆ ದುರಸ್ಥಿ ಕಾರ್ಯ ಆರಂಭಿಸಿದ್ದಾರೆ.
ಸಂಜೆಯ ವೇಳೆಗೆ ರಸ್ತೆ ದುರಸ್ಥಿಗೊಳಿಸುವ ಮೂಲಕ ಶಾಸಕರ ಆದೇಶ ಪಾಲಿಸುವುದರ ಜೊತೆಗೆ ವಾಹನ ಸವಾರರಲ್ಲಿಯೂ ನೆಮ್ಮದಿ ಮೂಡಿಸಿದ್ದಾರೆ. ವಾಹನ ಸವಾರ ಲಾಲ್ ಅಹ್ಮದ್ ಕವಡಿಮಟ್ಟಿ ಈಟಿವಿ ಭಾರತ ವರದಿಯಿಂದ ರಸ್ತೆ ದುರಸ್ಥಿಯಾಗಿರೋದ್ದಕ್ಕೆ ವಾಹಿನಿಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.