ETV Bharat / state

ಕೋವಿಡ್ ಕೇರ್ ಸೆಂಟರ್‌ಗೆ 4 ಆಕ್ಸಿಜನ್ ಕಾನ್ಸನ್ಟ್ರೇಟರ್ ದೇಣಿಗೆ ನೀಡಿದ ಚಿಂಚನಸೂರ್

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ವೈಯುಕ್ತಿಕವಾಗಿ ಗುರುಮಠಕಲ್​ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿರುವ ಕೊವೀಡ್ ಕೇರ್ ಸೆಂಟರ್‌ಗೆ 4 ಆಕ್ಸಿಜನ್ ಕಾನ್ಸನ್ಟ್ರೇಟರ್ ದೇಣಿಗೆ ನೀಡಿದರು.

Gurmatkal
4 ಆಕ್ಸಿಜನ್ ಕಾನ್ಸನ್ಟ್ರೇಟರ್ ದೇಣಿಗೆ ನೀಡಿದ ಬಾಬುರಾವ್ ಚಿಂಚನಸೂರ್
author img

By

Published : May 20, 2021, 11:55 AM IST

Updated : May 20, 2021, 12:46 PM IST

ಗುರುಮಠಕಲ್: ಸಂಕಷ್ಟದ ಪರಿಸ್ಥಿತಿಯಲ್ಲಿ ಜಾತಿ ಆಧಾರದ ಮೇಲೆ‌ ದೇಶ ಕಟ್ಟಲು ಸಾಧ್ಯವಿಲ್ಲ. ಬದಲಾಗಿ ನೀತಿ ಆಧಾರದ ಮೇಲೆ ದೇಶ ಕಟ್ಟಲು ಸಾಧ್ಯ ಎಂದು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ ಅಭಿಪ್ರಾಯಪಟ್ಟರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ

ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿರುವ ಕೊವೀಡ್ ಕೇರ್ ಸೆಂಟರ್‌ಗೆ 4 ಆಕ್ಸಿಜನ್ ಕಾನ್ಸನ್ಟ್ರೇಟರ್ ದೇಣಿಗೆ ನೀಡಿ ಬಳಿಕ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿಯೇ ಅತೀ ಬಡತನ ಇರುವುದು ಗುರುಮಠಕಲ್ ಮತಕ್ಷೇತ್ರದಲ್ಲಿ. ಇಲ್ಲಿನ ಜನರ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ. ಎ-1 ಸ್ಟೀಲ್ ಕಂಪನಿಯ ಸಹಾಯದೊಂದಿಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಪೂರೈಸಿದ್ದೇನೆ. ಕ್ಷೇತ್ರದ ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಲು ನಾನು ವೈಯುಕ್ತಿಕ ಹಾಗೂ ನಮ್ಮ ಸರ್ಕಾರದ ವತಿಯಿಂದ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಲಾಗುವುದು ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಪೂರೈಸುವ ಜತೆಗೆ ಜನರೇಟರ್ ವ್ಯವಸ್ಥೆ ಮಾಡಲಾಗುವುದು. ಜತೆಗೆ ಬೋರ್​ವೆಲ್​ ಕೊರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಎರಡು ದಿನಗಳಲ್ಲಿ ರೋಗಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗುವುದು. ಡಿ ಗ್ರೂಪ್​ ಸಿಬ್ಬಂದಿಗೆ ಮುದ್ನಾಳ ಕೋವಿಡ್​ ಕೇಂದ್ರದಿಂದ ಮೂಲ ಗುರುಮಠಕಲ್ ಕೋವಿಡ್ ಕೇರ್ ಕೇಂದ್ರಕ್ಕೆ ವರ್ಗಾಯಿಸಲಾಗುವುದು. ಜೊತೆಗೆ ಸೋಂಕಿನಿಂದ ಮೃತರಾದವರ ಅಂತಿಮ ಕ್ರಿಯೆಗೆ ನೆರವಾಗಲು ಪ್ರಯತ್ನಿಸುವುದು ಹಾಗೂ ವೈಯುಕ್ತಿಕವಾಗಿ ಹೆಚ್ಚುವರಿ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

Last Updated : May 20, 2021, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.