ಯಾದಗಿರಿ : ಹುಡುಗಿಯರನ್ನ ಮುಂದಿಟ್ಟುಕೊಂಡು ಹನಿ ಟ್ರ್ಯಾಪ್ ನಡೆಸುತ್ತಿದ್ದ, ಆರೋಪಿಗಳನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ.
ಸಿದ್ದಣ್ಣಗೌಡ ಪಾಟೀಲ್ ಶೀರವಾಳ, ಮಂಜುಳಾ ರಾಥೋಡ, ರಮೇಶ ರಾಥೋಡ, ಮೇಘಾ ಸುರಪೂರ ಎಂಬುವವರನ್ನು ಬಂಧಿಸಲಾಗಿದ್ದು,ನಗರದ ಕೆಲವೆಡೆ ಹೆಣ್ಣುಮಕ್ಕಳನ್ನು ಮುಂದಿಟ್ಟುಕೊಂಡು ಹನಿಟ್ಯ್ರಾಪ್ ನಡೆಸಿ ಬ್ಲ್ಯಾಕ್ ಮೇಲ್ ತಂತ್ರದ ಮೂಲಕ ಹಣ ಪೀಕುತ್ತಿದ್ದರು. ಹಣ ಕಳೆದುಕೊಂಡವರ ದೂರಿನ ಮೇರೆಗೆ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಇವರಿಂದ 98,000 ರೂಪಾಯಿ ಹಣವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.