ETV Bharat / state

ರಥದ ಚಕ್ರಕ್ಕೆ ಸಿಲುಕಿದ್ದ ಯುವಕ ಸಾವು: ವಿಡಿಯೋ ವೈರಲ್​ - surapra news

ಇದೇ ತಿಂಗಳ 5ನೇ ತಾರೀಖಿನಂದು ಅಗ್ನಿ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ನಡೆಸಲಾಗುತಿತ್ತು. ಮೊದಲ ಬಾರಿ ಕಟ್ಟಿಗೆ ರಥದ ಮೂಲಕ ಈ ಬಾರಿ ರಥೋತ್ಸವ ನಡೆಸಲಾಗಿತ್ತು.ಈ ವೇಳೆ ಗ್ರಾಮದ ರಮೇಶ್​ ಸಾಸನೂರ ರಥದ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ.

A man died who stucked in rathchakra at surapura
ರಥದ ಚಕ್ರಕ್ಕೆ ಸಿಲುಕಿದ್ದ ಯುವಕ ಸಾವು
author img

By

Published : Mar 13, 2021, 12:39 AM IST

ಸುರಪುರ: ತಾಲೂಕಿನ ಅಗ್ನಿ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆ ರಥೋತ್ಸವದ ವೇಳೇ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

ಸಾವಿಗೀಡಾದ ಯುವಕ
ಸಾವಿಗೀಡಾದ ಯುವಕ

ಇದೇ ತಿಂಗಳ 5ನೇ ತಾರೀಖಿನಂದು ಅಗ್ನಿ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ನಡೆಸಲಾಗುತಿತ್ತು. ಮೊದಲ ಬಾರಿ ಕಟ್ಟಿಗೆ ರಥದ ಮೂಲಕ ಈ ಬಾರಿ ರಥೋತ್ಸವ ನಡೆಸಲಾಗಿತ್ತು . ಈ ವೇಳೆ ಗ್ರಾಮದ ರಮೇಶ್​ ಸಾಸನೂರ ರಥದ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ. ನಂತರ ರಮೇಶ್​ನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ‌ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ.

ರಥದ ಚಕ್ರಕ್ಕೆ ಸಿಲುಕಿದ್ದ ಯುವಕ ಸಾವು

ರಥೋತ್ಸವ ಸಂದರ್ಭದಲ್ಲಿ ರಮೇಶ್​ ರಥದ ಚಕ್ರದಡಿ ಸಿಲುಕಿದ್ದರೂ ಭಕ್ತರು ಮಾನವೀಯತೆ ಮರೆತು ಹಾಗೆ ಆತನನ್ನು ತುಳಿಯುತ್ತಾ ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ. ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ನಿಷ್ಕಾಳಜಿ ವಹಿಸಿದ ಹಿನ್ನೆಲೆ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಕೆಂಭಾವಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.