ಯಾದಗಿರಿ: ಜಿಲ್ಲೆಯಲ್ಲಿ ಮತ್ತೆ ಮಹಾರಾಷ್ಟ್ರದಿಂದ ಆಗಮಿಸಿದ 22 ವಲಸಿಗರಿಗೆ ಕೊರೊನಾ ಸೋಂಕು ದೃೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 804 ಕ್ಕೆ ಏರಿಕೆಯಾಗಿದೆ.
ಒಂದರಿಂದ ಹದಿನೈದು ವರ್ಷದೊಳಗಿನ 5 ಮಕ್ಕಳು ಸೇರಿದಂತೆ ಒಟ್ಟು 22 ಜನರ ದೇಹದಲ್ಲಿ ಇಂದು ಮಹಾಮಾರಿ ವೈರಸ್ ಹೊಕ್ಕಿರುವುದು ಪತ್ತೆಯಾಗಿದೆ. ಇತ್ತೀಚೆಗೆ ಆಗಮಿಸಿದ ಇವರನ್ನೆಲ್ಲಾ ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಇಂದು ಇವರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟು ಸೋಂಕಿತರ ಪೈಕಿಯಲ್ಲಿ ಈವರೆಗೆ 272 ಜನ ಗುಣಮುಖರಾಗಿದ್ದು, 536 ಪ್ರಕರಣಗಳು ಸಕ್ರಿಯವಾಗಿದೆ. ಉಳಿದಂತೆ ಒಬ್ಬ ವೃದ್ದೆ ಮೃತಪಟ್ಟಿದ್ದಾರೆ. ದಿನ ಕಳೆದಂತೆ ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ವಲಸಿಗರಲ್ಲೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವದರಿಂದ ಜಿಲ್ಲೆಯ ಜನರ ಆತಂಕ ಮುಂದುವರೆದಿದೆ.