ಯಾದಗಿರಿ: ಮಹಾಮಾರಿ ಕೊರೊನಾ ಸೋಂಕು ಜಿಲ್ಲೆಯ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಹಾಗೂ 76 ಮಂದಿಗೆ ಸೋಂಕು ತಗುಲಿರುವುದ ದೃಢಪಟ್ಟಿದೆ.
ಇಂದು ವರದಿಯಾದ 76 ಕೊರೊನಾ ಪ್ರಕರಣಗಳಲ್ಲಿ ಯಾದಗರಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 24, ಶಹಾಪುರ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ 27, ಸುರಪುರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 22 ಮತ್ತು ಮೂರು ಪ್ರಕರಣ ಅಂತರ್ ಜಿಲ್ಲೆಯವರಾಗಿದ್ದಾರೆ.
ಮಹಾಮಾರಿ ಸೋಂಕಿಗೆ ಇಬ್ಬರು ಬಲಿಯಾಗುವ ಮೂಲಕ ಮೃತರ ಸಂಖ್ಯೆ 10ಕ್ಕೆ ಮತ್ತು ಸೋಂಕಿತರ ಸಂಖ್ಯೆ 2587ಕ್ಕೆ ಏರಿಕೆಯಾಗಿದೆ. ಯಾದಗಿರಿ ನಗರದ 62 ವರ್ಷದ ವೃದ್ಧೆ ಹಾಗೂ ಶಹಪುರ ಪಟ್ಟಣದ 65 ವರ್ಷದ ವೃದ್ಧೆ ಇಂದು ಸಾವನಪ್ಪಿದ್ದಾರೆ.
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ 13 ಜನರು ಇಂದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 1928 ಮಂದಿ ಕೊರೊನಾ ಗೆದ್ದು ಮನೆಗೆ ತೆರಳಿದ್ದಾರೆ. ಸದ್ಯ 649 ಮಂದಿ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.