ಮುದ್ದೇಬಿಹಾಳ: ಹೊಲದಲ್ಲಿ ಬೀಡುಬಿಟ್ಟು ಆತಂಕ ಮೂಡಿಸಿದ್ದ ಮೊಸಳೆ ಮರಿಯೊಂದನ್ನು ಯುವಕರು ಹಿಡಿದಿರುವ ಘಟನೆ ವಡವಡಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಜಯರಾಮ ಅರಮನಿ ಎಂಬುವರ ಹೊಲದಲ್ಲಿ ಹಲವು ದಿನಗಳಿಂದ ಮೊಸಳೆ ಮರಿ ಓಡಾಡುತ್ತಿತ್ತು. ಎತ್ತುಗಳ ಮೇಲೆ ದಾಳಿ ಕೂಡಾ ಮಾಡಿತ್ತು. ಇದರಿಂದ ಆತಂಕಗೊಂಡಿದ್ದ ರೈತ ಮೊಸಳೆ ಹಿಡಿಯುವ ನಿಡಗುಂದಿಯ ನಾಗೇಶ ವಡ್ಡರ ಹಾಗೂ ಅವರ ತಂಡಕ್ಕೆ ಮಾಹಿತಿ ನೀಡಿದ್ದರು.
ಮುಳ್ಳುಕಂಟಿಗಳಲ್ಲಿ ಅಡಗಿದ್ದ ಮೊಸಳೆಯನ್ನು ಹಿಡಿಯಲು ಮುಂದಾದಾಗ ಅದು ಯುವಕರ ಮೇಲೆ ದಾಳಿಗೆ ಹವಣಿಸಿದೆ. ಎರಡ್ಮೂರು ಬಾರಿ ತನ್ನ ಪ್ರತಾಪ ತೋರಿ ಕಚ್ಚಲು ಪ್ರಯತ್ನಿಸಿತು. ಇದರಿಂದ ಬಚಾವ್ ಆದ ಯುವಪಡೆ ಕೊನೆಗೂ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು
ಮೊಸಳೆ ಮರಿ ಬಾಯಿಯನ್ನು ಗಟ್ಟಿಯಾಗಿ ಕಟ್ಟಿ, ಬಳಿಕ ಕೈಕಾಲುಗಳನ್ನು ಹಗ್ಗದಿಂದ ಬಿಗಿದು ಕೃಷ್ಣಾ ನದಿಗೆ ಬಿಟ್ಟಿದ್ದಾರೆ.