ವಿಜಯಪುರ : ತಿಕೋಟಾ ತಾಲೂಕಿನ ಜಾಲಗೇರಿ ತಾಂಡಾ-1 ರಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಸಹದೇವ ಜುಮ್ಮನ್ನಗೋಳ ಮೃತ ಯುವಕ. ಈತ ಕಳ್ಳಭಟ್ಟಿ ಸೇವಿಸಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಬಲೇಶ್ವರ ನಿವಾಸಿಯಾಗಿದ್ದ ಸಹದೇವ, ತಾಯಿಯ ತವರೂರು ಜಾಲಗೇರಿಯಲ್ಲಿ ವಾಸವಿದ್ದ. ಹೋಳಿ ಹಬ್ಬದ ಕಾರಣ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಹೀಗಾಗಿ, ಸಹದೇವ ಕಳ್ಳಭಟ್ಟಿ ಕುಡಿದು ಮೃತಪಟ್ಟಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.
ಇದನ್ನೂ ಓದಿ : ನೇಣಿಗೆ ಕೊರಳೊಡ್ಡಿದ್ದ ವ್ಯಕ್ತಿ ಐದು ದಿನಗಳ ಬಳಿಕ ಸಾವು
ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಳ್ಳಭಟ್ಟಿ ಮಾರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ.
ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.