ETV Bharat / state

ಸಾಹಿತಿ ಕುಂ. ವೀ, ಡಿಕೆಶಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ 61 ಮಂದಿಗೆ ಜೀವ ಬೆದರಿಕೆ ಪತ್ರ! - ಸಾಹಿತಿ ಕುಂ ವೀರಭದ್ರಪ್ಪ ಮನೆಗೆ ಬಂದ 2ನೇ ಪತ್ರ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಸಾಹಿತಿ ಕುಂ.ವೀರಭದ್ರಪ್ಪ, ನಟ ಪ್ರಕಾಶ್ ರೈ, ಹೆಚ್​.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸೇರಿದಂತೆ ಒಟ್ಟು 61 ಜನರಿಗೆ ಜೀವ ಬೆದರಿಕೆ ಪತ್ರ ಬಂದಿದೆ.

ಕುಂ.ವೀರಭದ್ರಪ್ಪ
ಕುಂ.ವೀರಭದ್ರಪ್ಪ
author img

By

Published : May 14, 2022, 7:16 AM IST

Updated : May 15, 2022, 7:36 PM IST

ವಿಜಯನಗರ: ಸಾಹಿತಿ ಕುಂ.ವೀರಭದ್ರಪ್ಪ ಅವರ ಮನೆಗೆ ಮತ್ತೊಂದು ಕೊಲೆ ಬೆದರಿಕೆ ಪತ್ರ ಬಂದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರೋ ಕುಂ.ವೀರಭದ್ರಪ್ಪ ಅವರಿಗೆ ಕಳೆದ ಒಂದೂವರೆ ತಿಂಗಳೊಳಗೆ ಬಂದ ಎರಡನೇ ಪತ್ರ ಇದಾಗಿದ್ದು, 'ನೀವು ಪೇಪರ್ ಹೀರೋ ಆಗಲು ಹೊರಟಿದ್ದೀರಿ ಅಂತ' ಪತ್ರದಲ್ಲಿ ಬರೆಯಲಾಗಿದೆ.

ಜೀವ ಬೆದರಿಕೆ ಪತ್ರ
ಜೀವ ಬೆದರಿಕೆ ಪತ್ರ

ಮೊದಲ ಪತ್ರ ಬಂದಾಗ ವಿಜಯನಗರ ಎಸ್​ಪಿ ಡಾ. ಅರುಣ್ ಕೆ. ಅವರನ್ನ ಭೇಟಿಯಾಗಿ ರಕ್ಷಣೆ ನೀಡುವಂತೆ ಕುಂ. ವೀರಭದ್ರಪ್ಪನವರು ಮನವಿ ಮಾಡಿದ್ದರು. ಈ ಹಿಂದೆ ಅಂದ್ರೆ ಮೊದಲನೇ ಪತ್ರವನ್ನು ಭದ್ರಾವತಿಯಿಂದ ಪೋಸ್ಟ್​ ಮಾಡಲಾಗಿತ್ತು. ಈ ಸಲ ಚಿತ್ರದುರ್ಗದಿಂದ ಕಳುಹಿಸಲಾಗಿದೆ.

ಜೀವ ಬೆದರಿಕೆ ಪತ್ರ
ಜೀವ ಬೆದರಿಕೆ ಪತ್ರ

ಪತ್ರದಲ್ಲಿ 'ಸಾಹಿತಿಗಳು, ಪ್ರೊಫೆಸರ್‌ಗಳು, ಬುದ್ಧಿಜೀವಿಗಳು ಹಾಗೂ ನಿಮ್ಮ ದುಷ್ಟಕೂಟವು ದೇಶ ವಿರೋಧಿ, ಸಂವಿಧಾನ ವಿರೋಧಿ, ಹಿಂದೂ ಸಮಾಜ ಹೀಯಾಳಿಸುವ ಹೇಳಿಕೆಗಳನ್ನು ಕೊಡುತ್ತೀರಿ. ಒಂದು ಧರ್ಮದವರ ಪರ ಮಾತನಾಡುತ್ತೀರಿ. ನೀವೆಲ್ಲಾ ಕ್ಷಮೆ ಕೇಳಬೇಕು, ಇಲ್ಲ ಸಾಯಲು ಸಿದ್ಧರಾಗಿ. ಜೈ ಹಿಂದೂ ರಾಷ್ಟ್ರ, ಸಹಿಷ್ಣು ಹಿಂದೂ' ಎಂಬ ಉಲ್ಲೇಖಿಸಲಾಗಿದೆ.

ಜೀವ ಬೆದರಿಕೆ ಪತ್ರ
ಜೀವ ಬೆದರಿಕೆ ಪತ್ರ

ಕುಂವೀ ಮಾತ್ರವಲ್ಲದೇ, ಮಾಜಿ ಸಿಎಂಗಳಾದ ಹೆಚ್​.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ಶ್ರೀ, ಬಿ ಕೆ ಹರಿಪ್ರಸಾದ್, ಪ್ರಕಾಶ್ ರೈ, ದಿನೇಶ್ ಗುಂಡೂರಾವ್ ಸೇರಿದಂತೆ ಬರೋಬ್ಬರಿ 61 ಜನರಿಗೆ ಬೆದರಿಕೆ ಪತ್ರ ಬಂದಿದೆ.

ಜೀವ ಬೆದರಿಕೆ ಪತ್ರ
ಜೀವ ಬೆದರಿಕೆ ಪತ್ರ

ಈ ಕುರಿತು ಪ್ರತಿಕ್ರಿಯಿಸಿರುವ ಕುಂ.ವೀರಭದ್ರಪ್ಪ, ಇಂದು (ಮೇ 14) ಚಿತ್ರದುರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಬೇಕು. ಈಗ ಅಲ್ಲಿಂದಲೇ ಪತ್ರ ಬಂದಿದ್ದು, ಇದರ ಹಿಂದಿನ ಮರ್ಮ ಏನೆಂಬುದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಪುತ್ರಿ ರಾಜನಂದಿನಿಗೆ ಜೀವ ಬೆದರಿಕೆ

Last Updated : May 15, 2022, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.