ವಿಜಯಪುರ: ಇಮಾಮ್ ಬುಕಾರಿಯಾ ಈ ದೇಶದ ಅಲ್ಪಸಂಖ್ಯಾತರ ಗುರುಗಳು. ಹಬ್ಬ ಹುಣ್ಣಿಮೆ ಬಂದಾಗ ಅವರು ಹೇಳಿದ ಹಾಗೆ ನಡೆದುಕೊಳ್ಳುತ್ತೀರಿ. ಈಗ ಅವರೇ ಈ ಕಾಯ್ದೆಯಿಂದ ಯಾವುದೂ ತೊಂದರೆ ಇಲ್ಲ, ಇದು ನಮ್ಮ ಒಳ್ಳೆಯದಕ್ಕಾಗಿ ತಂದಿರುವ ಕಾನೂನು ಎಂದು ದೆಹಲಿಯಲ್ಲಿ ಹೇಳಿದ್ದಾರೆ. ಇದನ್ನು ಏಕೆ ಒಪ್ಪುತ್ತಿಲ್ಲ ಎಂದು ಸಂಸದ ರಮೇಶ್ ಜಿಗಜಿಣಗಿ ಪ್ರಶ್ನಿಸಿದ್ದಾರೆ.
ವಿಜಯಪುರದ ಮುರಣಕೇರಿಯಲ್ಲಿ ಪೌರತ್ವ ಕಾಯ್ದೆ ಜಾಗೃತಿಗಾಗಿ ಮನೆ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ನಾನು ನಮ್ಮ ಕಾರ್ಯಕರ್ತರು ಹೇಳುವುದು ಏನು ಉಳಿದಿದೆ. ಅಲ್ಪಸಂಖ್ಯಾತರ ಗುರುಗಳು ಹೀಗೆ ಹೇಳಬೇಕು ಎಂದರೆ ಅವರಿಗೇನು ಜ್ಞಾನ ಇಲ್ಲವಾ..? ಎಂದರು.
ಪೌರತ್ವ ಕಾಯ್ದೆಯಿಂದ ಅಲ್ಪ ಸಂಖ್ಯಾತರರಿಗೆ ತೊಂದರೆ ಆಗುತ್ತಿದೆ ಎಂದು ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ತಲೆ ಕೆಡಿಸುತ್ತಿದ್ದಾರೆ. ಈ ದೇಶದ ಅಲ್ಪಸಂಖ್ಯಾತರಿಗೆ ಗಂಡಾಂತರ ಇರುವುದು ಕಾಂಗ್ರೆಸ್‌ನಿಂದ ಹೊರತು ಬಿಪಿಜೆಯಿಂದಲ್ಲ ಎಂದರು.
ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವನು ಬೇರೆ ಏನನ್ನೂ ಹೇಳಿಲ್ಲ. ಪರ್ಯಾಯವಾಗಿ ಬೇರೆ ರೀತಿಯಿಂದ ಹೇಳಿದ್ದಾನೆ. ಕಾಂಗ್ರೆಸ್ ನವರು ಈ ರೀತಿಯಾಗಿ ತಪ್ಪು ಮಾಡುತ್ತಿದ್ದಾರೆ. ನೀವು ತಲೆ ಕೆಡಿಸಿಕೊಳ್ಳಬೇಡಿ, ಈ ರೀತಿ ಮುಂದುವರೆದರೆ ಜನರೇ ರೊಚ್ಚಿಗೇಳುತ್ತಾರೆ ಎಂದಿದ್ದಾರೆ ಅಷ್ಟೇ.. ಅವರು ಏನೋ ಹೇಳಲು ಹೋಗಿ ಸ್ವಲ್ಪ ವ್ಯತ್ಯಾಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.