ವಿಜಯಪುರ: ಜಿಲ್ಲೆಯ ಬ್ಯಾರೇಜ್‌ನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾದ ಹಿನ್ನೆಲೆ ಭೀಮಾ ತೀರದ ನಾನಾ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೇಜ್‌ನಿಂದ ಇಂದು ಮಧ್ಯಾಹ್ನ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಭೀಮಾ ನದಿ ತೀರದ ಸಿಂದಗಿ ತಾಲೂಕಿನ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಸಿಂದಗಿ ತಾಲೂಕಿನ ದೇವಣಗಾಂವದ ಸೇತುವೆ ಬಳಿ 8.60 ಮೀ. ಎತ್ತರದವರೆಗೆ ನೀರು ಹರಿಯುತ್ತಿದೆ. ಸಿಂದಗಿ ತಾಲೂಕಿನ ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೇವಾಡ, ಶಂಬೇವಾಡ, ಕುಮಸಗಿ, ಚಿಕ್ಕಹವಳಗಿ, ಬಗಲೂರ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ.
ಗೋಡೆ ಕುಸಿತ : ದೇವರಹಿಪ್ಪರಗಿಯ ವಾರ್ಡ್ ನಂ.5ರ ನಿವಾಸಿ ಮೊಹ್ಮದ್ ನದಾಫ್ ಎಂಬುವರ ಮನೆಯ ಗೋಡೆ ಕುಸಿದಿದ್ದು, ಅಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.