ವಿಜಯಪುರ: ಇಲ್ಲಿನ ವಸತಿ ನಿಲಯವೊಂದರ ವಾರ್ಡನ್ವೊಬ್ಬ ಮಕ್ಕಳ ಜೊತೆ ಸಲಿಂಗಕಾಮ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವಿಜಯಪುರ ಜಿಲ್ಲೆ ವಸತಿ ನಿಲಯವೊಂದರ ವಾರ್ಡನ್ ಈ ರೀತಿಯ ಮಾನಗೇಡಿ ಕೆಲಸಕ್ಕೆ ಕೈ ಹಾಕಿದ್ದಾನೆ. ಗಂಡು ಮಕ್ಕಳ ವಸತಿ ನಿಲಯದ ವಾರ್ಡನ್ ಇಂತಹ ಕೆಲಸ ಮಾಡಿದ್ದಾನೆ ಎನ್ನಲಾಗಿದೆ. ಹಾಸ್ಟೆಲ್ ಕೋಣೆಯಲ್ಲೇ ವಸತಿ ನಿಲಯದ ಮಕ್ಕಳೊಂದಿಗೆ ಹಾಗೂ ವ್ಯಕ್ತಿಯೊಬ್ಬನೊಂದಿಗೆ ಕಾಮ ಕುಚೋದ್ಯ ಮಾಡಿ ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದಾನೆ.
ವಾರ್ಡನ್ನ ರಾಸಲೀಲೆ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದು, ಆತನ ವಿರುದ್ಧ ಸಾರ್ವಜನಿಕರು ಆಕ್ರೋಶವಾಗಿದ್ದಾರೆ. ಇಂತಹ ಸಲಿಂಗಕಾಮಿ ನಮ್ಗೆ ಬೇಡ ಎಂದು ನೊಂದ ವಿದ್ಯಾರ್ಥಿಗಳು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಬಡ ಪೋಷಕರು ತಮ್ಮ ಮಕ್ಕಳನ್ನು ವಸತಿ ನಿಲಯಗಳಲ್ಲಿ ಬಿಟ್ಟಿರ್ತಾರೆ. ಆದ್ರೆ ಇಂತಹ ಕೆಲ ಕಾಮುಕ ನೌಕರರು ಮಾಡುವ ದುಷ್ಕೃತ್ಯಗಳಿಂದ ಎಲ್ಲರೂ ಭಯ ಬೀಳುವಂತಾಗಿದೆ. ಅದರಲ್ಲೂ ನಿವೃತ್ತಿ ವಯಸ್ಸಿನ ಅಂಚಿನಲ್ಲಿರುವ ಹಾಸ್ಟೆಲ್ ವಾರ್ಡನ್ನ ಈ ಕುಕೃತ್ಯದ ವಿಡಿಯೋ ನೋಡಿದ ಪ್ರತಿಯೊಬ್ಬರೂ ಮೆಟ್ರಿಕ್ ಪೂರ್ವ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆತನಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕಠಿಣ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.