ವಿಜಯಪುರ: 15 ವರ್ಷದೊಳಗಿನ ಬಾಲಕಿಯರ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲೆಯ ಶ್ರೇಯಾ ಎಸ್.ಚವ್ಹಾಣ ಹಾಗೂ ಪ್ರಿಯಾ ಎಸ್.ಚವ್ಹಾಣ ಎಂಬಿಬ್ಬರನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಕರ್ನಾಟಕ ತಂಡವನ್ನು ಇವರು ಪ್ರತಿನಿಧಿಸಲಿದ್ದಾರೆ.
ಗುಜರಾತಿನ ರಾಜ್ಕೋಟ್ನಲ್ಲಿ ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅಸ್ಸಾಂ, ರಾಜಸ್ಥಾನ, ಜಮ್ಮು ಕಾಶ್ಮೀರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ತಂಡದ ಜತೆ ಆಡಲು ಬಾಲಕಿಯರು ಸಜ್ಜಾಗಿದ್ದಾರೆ. ಪ್ರಿಯಾ ಚವ್ಹಾಣ ನಗರದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತಿದ್ದು, ತಂದೆ ಬಸ್ ಕಂಡಕ್ಟರ್ ಆಗಿದ್ದಾರೆ. ಶ್ರೇಯಾ ಚವ್ಹಾಣ ನಗರದ ಖಾಸಗಿ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇವರ ತಂದೆ ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಬ್ಬರು ಬಾಲಕಿಯರು ಓಂ ಕ್ರಿಕೆಟ್ ಅಕಾಡಮಿ ಮತ್ತು ಸ್ಪೋರ್ಟ್ಸ್ ಅರೆನಾ ಕ್ಲಬ್ನಲ್ಲಿ ಕೋಚ್ ಮುರಳಿ ಬೀಳಗಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬಾಲಕಿಯರ ಆಯ್ಕೆಗೆ ಕ್ಲಬ್ ಕಾರ್ಯದರ್ಶಿ ರಾಜೇಶ ತೊರವಿ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್! ಸದ್ಯದ ಲೆಕ್ಕ ಹೀಗಿದೆ..