ವಿಜಯಪುರ: ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಎಂಪಿಎಂಸಿ ಮಾರುಕಟ್ಟೆಯ ಮಳಿಗೆಗಳ ಎದುರಿನ ರಸ್ತೆ ಕೆಸರು ಗದ್ದೆಯಂತಾಗಿದೆ. ಇದರಿಂದ ಸೊಳ್ಳೆಕಾಟ ಹೆಚ್ಚಾಗಿದೆ. ಇಲ್ಲಿಗೆ ಬರುವ ಗ್ರಾಹಕರಿಗೆ ಹಾಗೂ ರೈತರಿಗೆ ಸಾಂಕ್ರಾಮಿಕ ಭೀತಿ ಎದುರಾಗಿದೆ.
ಜಿಲ್ಲೆಯ ರೈತರ ವ್ಯಾಪಾರ ಕೇಂದ್ರವಾದ ಎಂಪಿಎಂಸಿಯು ಕೊಳಚೆ ಮಿಶ್ರಿತ ನೀರಿನಿಂದ ತುಂಬಿಕೊಂಡಿದೆ. ದುರ್ವಾಸನೆ ಭೀರುತ್ತಿದ್ದು, ತರಕಾರಿ ಮಾರುಕಟ್ಟೆ ಕಡೆ ಹೋಗುವುದು ಕಷ್ಟವಾಗಿದೆ. ಕೊರೊನಾ ಭೀತಿಯ ನಡುವೆ ತರಕಾರಿ ಹಾಗೂ ಹಣ್ಣು ಮಾರಾಟಕ್ಕೆ ಬರುವ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ.
ಅಷ್ಟೇ ಅಲ್ಲದೇ ನಿತ್ಯ ನೂರಾರು ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಇದೇ ದಾರಿ ಮೂಲಕ ಸಾಗಿಸುವ ಅನಿವಾರ್ಯತೆ ಇದೆ. ಸ್ವಲ್ಪ ಆಯತಪ್ಪಿದರು ಅಪಾಯ ಎದುರಾಗುವ ಸಂಭವವಿದೆ ಎಂದು ವರ್ತಕರೊಬ್ಬರು ಹೇಳಿದರು.
ವಾರದಿಂದ ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಮಾರುಕಟ್ಟೆ ಸ್ವಚ್ಛಗೊಳಿಸುವಂತೆ ಎಪಿಎಂಸಿ ವರ್ತಕರು ಮನವಿ ಮಾಡಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸುತ್ತಿಲ್ಲ ಎಂದು ವರ್ತರು ಆರೋಪಿಸಿದರು. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು, ಮಾರುಕಟ್ಟೆ ಸ್ವಚ್ಛತೆಗ ಮುಂದಾಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.