ETV Bharat / state

ಕರ್ನಾಟಕ ಬಂದ್ ಹಿನ್ನೆಲೆ : ವಿಜಯಪುರ ಮಹಿಳಾ ವಿವಿ ಸ್ನಾತಕ ಪರೀಕ್ಷೆಗಳು ಮುಂದೂಡಿಕೆ

author img

By

Published : Sep 26, 2020, 6:13 PM IST

ಸೆ.28 ರಂದು ವಿಜಯಪುರ ಮಹಿಳಾ ವಿವಿಯಲ್ಲಿ ಸ್ನಾತಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಆ ದಿನ ರೈತ ಸಂಘಟನೆಗಳಿಂದ ಕರ್ನಾಟಕ ಬಂದ್, ರಸ್ತೆ ತಡೆ ಇರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.

Vijayapura women vv
Vijayapura women vv

ವಿಜಯಪುರ: ಸೆ.28 ರಂದು ರೈತ ಸಂಘಟನೆಗಳು ಕರ್ನಾಟಕ ಬಂದ್ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮಹಿಳಾ ವಿವಿ ಸ್ನಾತಕ ಪದವಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ.

ಮಹಿಳಾ ವಿವಿಯೂ ಸೆ. 28 ರಂದು ಸ್ನಾತಕ ಪದವಿ ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಆದರೆ, ಆ ದಿನ ರೈತ ಸಂಘಟನೆಗಳಿಂದ ರಸ್ತೆ ತಡೆ, ಕರ್ನಾಟಕ ಬಂದ್ ನಡೆಯಲಿದ್ದು, ಈ ಸಂಬಂಧ ಅಂದು ನಡೆಯಬೇಕಿದ್ದ ಎಲ್ಲಾ ಸ್ನಾತಕ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಅದರ ಬದಲು ಅ.1 ರಂದು ಎಲ್ಲಾ ಸ್ನಾತಕ ಪದವಿ ಪರೀಕ್ಷೆ ಆಯೋಜನೆ ಮಾಡಲಾಗಿದ್ದು, ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಅ.1 ರಂದು ಆರಂಭವಾಗಬೇಕಿದ್ದ 2 ಮತ್ತು 4ನೇ ಸೆಮಿಸ್ಟರ್ ರಿಪೀಟರ್ ಪರೀಕ್ಷೆ ಅ. 3 ರಿಂದ ಆರಂಭವಾಗಲಿವೆ ಎಂದು ವಿಜಯಪುರ ಅಕ್ಕಮಹಾದೇವಿ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಪಿ. ಜಿ. ತಡಸದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.