ETV Bharat / state

'ಸಬಲಾ' ಮೂಲಕ ನೂರಾರು ಮಹಿಳೆಯರಿಗೆ ಅನ್ನದಾತೆಯಾದ ಮಲ್ಲಮ್ಮ ಯಾಳವಾರ - ಆನ್ ಲೈನ್​ನಲ್ಲಿ ಕರಕುಶಲ ಮಾರಾಟ

ಮಲ್ಲಮ್ಮ ಯಾಳವಾರ ಎಂಬುವವರು ಸಬಲಾ ಎಂಬ ಸಂಸ್ಥೆಯನ್ನು ಕಟ್ಟುವ ಮೂಲಕ ನೂರಾರು ಮಹಿಳೆಯರಿಗೆ ಆಸರೆಯಾಗಿದ್ದಾರೆ. ಮಹಿಳೆಯರು ಬಳಸುವ ಎಲ್ಲ ಕರಕುಶಲ ವಸ್ತುಗಳನ್ನು ಈ ಸಂಸ್ಥೆಯಲ್ಲಿ ತಯಾರಿಸಿ ದೇಶ ವಿದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ.

Vijayapura woman Mallamma Yalawara started the sabala organization
ಮಹಿಳೆ ಅಬಲೆಯಲ್ಲ ಸಬಲೆ ಎಂದು ತೋರಿಸಿಕೊಟ್ಟ ಮಲ್ಲಮ್ಮ ಯಾಳವಾರ
author img

By

Published : Mar 7, 2022, 7:32 PM IST

ವಿಜಯಪುರ: ಸಬಲಾ ಎಂಬ ಸಂಸ್ಥೆಯ ಮೂಲಕ ಮಲ್ಲಮ್ಮ ಯಾಳವಾರ ಎಂಬುವವರು ನೂರಾರು ಮಹಿಳೆಯರಿಗೆ ಉದ್ಯೋಗ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ನಗರದ ಹೊರವಲಯದಲ್ಲಿ ಸಬಲಾ ಹ್ಯಾಂಡಿಕ್ರಾಫ್ಟ್ ಸೇರಿದಂತೆ ಹತ್ತು ‌ಹಲವು ಉದ್ಯೋಗ ಸೃಷ್ಟಿ ಮಾಡಿ ಬಡಮಹಿಳೆಯರಿಗೆ ಮಹಾತಾಯಿಯಾಗಿದ್ದಾರೆ.

ಮಹಿಳೆ ಅಬಲೆಯಲ್ಲ ಸಬಲೆ ಎಂದು ತೋರಿಸಿಕೊಟ್ಟ ಮಲ್ಲಮ್ಮ ಯಾಳವಾರ

35 ವರ್ಷದ ಹಿಂದೆ ಆರಂಭಿಸಿದ್ದ ಸಬಲಾ ಕೇಂದ್ರ ಈಗ ನೂರಾರು ಮಹಿಳೆಯರಿಗೆ ದಾರಿದೀಪವಾಗಿದೆ. ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಯಲ್ಲಮ್ಮ ಯಾಳವಾರ ಅವರೊಂದಿಗೆ ಈಟಿವಿ ಭಾರತ ವಿಶೇಷ ಸಂದರ್ಶನ ನಡೆಸಿದ್ದು, ಇಲ್ಲಿ ಅವರು ತಾವು ನಡೆದು ಬಂದ ದಾರಿ ಮತ್ತು ಎದುರಿಸಿದ ಸವಾಲುಗಳನ್ನು ವಿವರಿಸಿದರು.

ಸಬಲಾ ಸಂಸ್ಥೆಯಲ್ಲಿ ತಯಾರಾದ ಬ್ಯಾಗ್​ಗಳು
ಸಬಲಾ ಸಂಸ್ಥೆಯಲ್ಲಿ ತಯಾರಾದ ಬ್ಯಾಗ್​ಗಳು

ಮಹಿಳೆಯರು ಬಳಸುವ ಎಲ್ಲ ಕರಕುಶಲ ವಸ್ತುಗಳನ್ನು ಈ ಸಂಸ್ಥೆಯಲ್ಲಿ ತಯಾರಿಸಿ ದೇಶ ವಿದೇಶಗಳಲ್ಲಿ ಮಾರಾಟ ಮಾಡುವ ದಾರಿಯನ್ನು ಯಲ್ಲಮ್ಮ ಕಂಡುಕೊಂಡಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಮಹಿಳೆಯರು ಅಲಂಕೃತ ಹ್ಯಾಂಡಿಕ್ರಾಪ್ಟ್ ತಯಾರಿಸಿ ಅವುಗಳು ವಸ್ತುಪ್ರದರ್ಶನ ಮತ್ತು ಹೋಲ್​​​ಸೇಲ್ ಮಾರಾಟ ಮಾಡುತ್ತಿದ್ದಾರೆ.‌ ದುಡ್ಡು ಉಳಿತಾಯಕ್ಕಾಗಿ ಬ್ಯಾಂಕ್ ಸಹ ತೆರೆದಿದ್ದಾರೆ. ಈ ಬ್ಯಾಂಕ್​ನಲ್ಲಿ ಸಾವಿರಾರು ಮಹಿಳೆಯರು, ಪುರುಷರು ಠೇವಣಿ ಇಡುವಂತೆ ಮಾಡಿದ್ದಾರೆ. ಪ್ರತಿ ವರ್ಷ 150 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದಾರೆ.

ಕೆಲಸ ಕೇಳಿಕೊಂಡು ಬರುವ ಮಹಿಳೆಯರಿಗೆ ಕರಕುಶಲ ತಜ್ಞರಿಂದ ತರಬೇತಿ‌ ಕೊಡಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದ್ದಾರೆ. ಮಹಿಳೆಯರು ಅಲಂಕಾರಿಕವಾಗಿ ಬಳಸುವ ವಸ್ತು, ಸೀರೆ, ಆಭರಣ ಸೇರಿದಂತೆ 1000ಕ್ಕೂ ಹೆಚ್ಚು ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಅಲ್ಲದೇ ಈ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ.‌

ಇದನ್ನೂ ಓದಿ: 'ಅತಿಥಿ ಸತ್ಕಾರ' ಮಾಡಿ ಉದ್ಯಮಿಯಾಗಿ ಬೆಳೆದ ಮೈಸೂರು ಮಹಿಳೆ!

ಆನ್ ಲೈನ್​ನಲ್ಲಿ ಕರಕುಶಲ ವಸ್ತುಗಳ ಮಾರಾಟ: ಸಬಲಾ ಸಂಸ್ಥೆ ಗ್ರಾಮೀಣ ಭಾಗಕ್ಕೆ ಅಷ್ಟೇ ತಲುಪಿಲ್ಲ, ಈಗ ಆನ್ ಲೈನ್ ಮೂಲಕ ವಸ್ತುಗಳ ಮಾರಾಟ ಸಹ ಮಾಡಲಾಗುತ್ತಿದೆ.

ಹೇರಿಟೇಜ್ ನಿರ್ಮಾಣ: ವಿದೇಶ ಸೇರಿದಂತೆ ವಿವಿಧ ಕಡೆಯಿಂದ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಹೇರಿಟೇಜ್ ಸಹ ನಿರ್ಮಾಣ ಮಾಡಲಾಗಿದೆ.‌ ಪ್ರವಾಸಿಗರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುವುದರ ಜೊತೆಗೆ ಉತ್ತರ ಕರ್ನಾಟಕದ ಊಟವನ್ನು ಸಹ ನೀಡಲಾಗುತ್ತದೆ. ಸಬಲಾ ಸಂಸ್ಥೆಯ ಆವರಣದಲ್ಲಿ ಗಿಡಮರಗಳನ್ನು ಸಹ ಬೆಳೆಸಲಾಗುತ್ತಿದೆ.

ಸಬಲಾ ಸಂಸ್ಥೆಯಲ್ಲಿ ತಯಾರಾದ  ಸರಗಳು
ಸಬಲಾ ಸಂಸ್ಥೆಯಲ್ಲಿ ತಯಾರಾದ ಸರಗಳು

ಅರಸಿ ಬಂದ ಪ್ರಶಸ್ತಿಗಳು: ಮಲ್ಲಮ್ಮ ಯಾಳವಾರ ಅವರ ಸಾಧನೆ‌ಗೆ ಮಹಿಳಾ ವಿವಿಯಿಂದ ಡಾಕ್ಟರೇಟ್ ಪ್ರಶಸ್ತಿ ದೊರೆತಿದೆ. ಇದರ ಜೊತೆಗೆ ವರ್ಷದ ಕನ್ನಡತಿ, ವೀರರಾಣಿ ಕಿತ್ತೂರ ಚೆನ್ನಮ್ಮ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.