ವಿಜಯಪುರ: ಕೆಲವು ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ಮತದಾರರ ಪಟ್ಟಿಯಲ್ಲಿ ಅನೇಕ ಜನರ ಹೆಸರು ಬಂದಿಲ್ಲ, ನಿಮ್ಮ ತಪ್ಪಿನಿಂದಾಗಿ ಅವರು ತೊಂದರೆಗೆ ಸಿಲುಕುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ನಗರದ ಕಂದಗಲ್ ಹನುಮಂತರಾಯ್ ರಂಗಮಂದಿರಲ್ಲಿ ಯತ್ನಾಳ ನೇತೃತ್ವದಲ್ಲಿ ನಡೆದ ಶಿಕ್ಷಕರ ಬಿಎಲ್‌ಓ ಸಭೆಯಲ್ಲಿ, ವಿಜಯಪುರ ನಗರ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 150 ಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮತದಾರ ಪಟ್ಟಿ ಕ್ರಮದ ಕುರಿತಾಗಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಶಿಕ್ಷಕರಿಗೆ ಶಾಸಕರು ಸೂಚನೆ ನೀಡಿದ್ರು.
ಕೆಲವು ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ಮತದಾರರ ಪಟ್ಟಿಯಲ್ಲಿ ಅನೇಕ ಜನರ ಹೆಸರು ಬಂದಿಲ್ಲ, ನಿಮ್ಮ ತಪ್ಪಿನಿಂದಾಗಿ ಅವರು ತೊಂದರೆಗೆ ಸಿಲುಕುತ್ತಿದ್ದಾರೆ ಎಂದು ಯತ್ನಾಳ್ ಅವರು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡರು.
ನೀವು ವರ್ಗಾವಣೆ ಮಾಡಿಸಲು ಯಾವ ರೀತಿ ಕಸರತ್ತು ನಡೆಸಿದ್ರಿ, ಯಾವ ಲೆಟರ್‌ಗಳು ಎಷ್ಟು ಹಣಕ್ಕೆ ಮಾರಾಟವಾಗಿವೆ ಎಂದು ನನಗೆ ತಿಳಿದಿದೆ. ಆ ಎಂಎಲ್‌ಎ ಈಗ ಇಲ್ಲವೆಂದು ಕೆಲ ಶಿಕ್ಷಕರ ವಿರುದ್ಧ ಗುಡುಗಿದರು.
ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹೆಚ್. ಪ್ರಸನ್ ಕುಮಾರ ಸಭೆಯಲ್ಲಿ ಭಾಗಿಯಾಗಿದ್ದರು.