ETV Bharat / state

ವಿಜಯಪುರ ರೌಡಿ ಶೀಟರ್‌ ಕೊಲೆ ಪ್ರಕರಣ: ಐವರ ಬಂಧನ - ವಾರದ ಹಿಂದೆ ರೌಡಿ ಶೀಟರ್‌ ಕೊಲೆ

ಪ್ರಕರಣದ ಪ್ರಮುಖ ಆರೋಪಿ ಅಣ್ಣಪ್ಪಗೌಡನ ಹೆಂಡತಿ, ಕೊಲೆಯಾದವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಎಸ್​​ಪಿ ಅಗರವಾಲ್‌ ತಿಳಿಸಿದ್ದಾರೆ.

ಐವರ ಬಂಧನ
ಐವರ ಬಂಧನ
author img

By

Published : Apr 19, 2021, 5:44 PM IST

ವಿಜಯಪುರ: ವಾರದ ಹಿಂದೆ ತೋಟದ ಮನೆಯಲ್ಲಿ ರೌಡಿ ಶೀಟರ್​ನನ್ನು ‌ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಆದರ್ಶ ನಗರ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪ್ಪಣ್ಣಗೌಡ ಬಾಗಾಯತ, ಸಂತೋಷ ರಾಠೋಡ್, ಶ್ಯಾಮರಾಯ ರಾಠೋಡ್​, ವಿಲಾಸ ರಾಠೋಡ್​ ಹಾಗೂ ಸಂತೋಷ ಚವ್ಹಾಣ ಬಂಧಿತ ಆರೋಪಿಗಳು. ಇವರು ಕಳೆದ ಭಾನುವಾರ ನಗರದ ಹೊರವಲಯದ ಇಟ್ಟಂಗಿಹಾಳದಲ್ಲಿ ರೌಡಿಶೀಟರ್ ದಸ್ತಗಿರಿಸಾಬ್ ಮಮದಾಪೂರನನ್ನು ಆತನ ತೋಟದ ಮನೆಯಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್​ಪಿ ಅಗರ್ವಾಲ್​​

ಪ್ರಕರಣದ ಪ್ರಮುಖ ಆರೋಪಿ ಅಣ್ಣಪ್ಪಗೌಡನ ಹೆಂಡತಿ, ಕೊಲೆಯಾದವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಎಸ್​​ಪಿ ಅಗರವಾಲ್‌ ತಿಳಿಸಿದ್ದಾರೆ.

ಹತ್ಯೆಗೆ ಬಳಸಿದ್ದ ಒಂದು ಚಾಕು, ಒಂದು ಸ್ಕೂಟರ್ ಸೇರಿ 2,400 ರೂ. ನಗದನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.