ವಿಜಯಪುರ: ಕೊರೊನಾ ಭೀತಿಗೂ ಕ್ಯಾರೇ ಎನ್ನದೆ ಜನರು ಗುಂಪು ಗುಂಪಾಗಿ ತರಕಾರಿ ಮಾರಾಟ ಮಾಡಿದ ಘಟನೆ ಬಸವ ನಗರದ ಆಯುರ್ವೇದಿಕ ಕಾಲೇಜು ರಸ್ತೆಯಲ್ಲಿ ನಡೆದಿದೆ.
ಜಿಲ್ಲಾಡಳಿತ ಆದೇಶ ಧಿಕ್ಕರಿಸಿ ಗುಂಪಾಗಿ ತರಕಾರಿ ವಹಿವಾಟಿನಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ 10 ಜನರಿಗೆ ಕೊರೊನಾ ಸೋಂಕು ತಗಲಿದೆ. ಹೀಗಾಗಿ ಜಿಲ್ಲಾಡಳಿತ ಸ್ಟೇಷನ್ ರಸ್ತೆಯ ಕೆಲವು ಏರಿಯಾಗಳನ್ನ ರೆಡ್ ಜೋನ್ ಪ್ರದೇಶ ಎಂದು ಘೋಷಿಸಿ ಸಾರ್ವಜನಿಕ ಸಂಚಾರ ಸಂಪೂರ್ಣ ನಿಷೇಧ ಹೇರಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ದಟ್ಟನೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಾರುಕಟ್ಟೆ 5 ಭಾಗಗಳಲ್ಲಿ ನಡೆಸಲಾಗುತ್ತಿದೆ. ಆದರು ಎ.ವ್ಹಿ ಎಸ್ ಆಯುರ್ವೇದಿಕ್ ಕಾಲೇಜು ರಸ್ತೆಯಲ್ಲಿ ಜನರು ಗುಂಪಾಗಿ ತರಕಾರಿ ಖರೀದಿಯಲ್ಲಿ ತೊಡಗಿದ್ದಾರೆ.
ಇನ್ನೂ ಸಾಮಾಜಿಕ ಅಂತರ ಜನರು ಕಾಯ್ದುಕೊಂಡು ವ್ಯಾಪಾರ ನಡೆಸುವಂತೆ ತರಕಾರಿ ವ್ಯಾಪಾರಿಗಳಿಗೆ ಜಿಲ್ಲಾಡಳಿತ ತಾಕೀತು ಮಾಡಿದರೂ ಕೂಡ ಸಾರ್ವಜನಿಕರು ಜಿಲ್ಲಾಡಳಿತದ ಆದೇಶಕ್ಕೂ ಕ್ಯಾರೆ ಎನ್ನದೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ.