ETV Bharat / state

ಕೊರೊನಾ ಲಾಕ್​​ಡೌನ್​ ಕರಾಳ ದಿನಗಳ ಅನುಭವ ಬಿಚ್ಚಿಟ್ಟ ಶಾಸಕ ನಡಹಳ್ಳಿ

ಲಾಕ್​ಡೌನ್​ ಸಂದರ್ಭ ಅಂತಾರಾಜ್ಯದಲ್ಲಿದ್ದ ವಿಜಯಪುರ ಜಿಲ್ಲೆಯ ವಲಸೆ ಕಾರ್ಮಿಕರು ಅನುಭವಿಸಿದ ಸಂಕಷ್ಟಗಳನ್ನು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

vijayapura-migrant-workers-problems
ಶಾಸಕ ನಡಹಳ್ಳಿ
author img

By

Published : May 30, 2020, 12:22 PM IST

ಮುದ್ದೇಬಿಹಾಳ (ವಿಜಯಪುರ): ಕೊರೊನಾ ವೈರಸ್ ಪತ್ತೆಯಾಗುತ್ತಿದ್ದಂತೆ ಅದರ ನಿಯಂತ್ರಣಕ್ಕೆ ಘೋಷಣೆಯಾದ ಲಾಕ್​​ಡೌನ್ ವಲಸೆ ಕಾರ್ಮಿಕರ ಪಾಲಿಗೆ ಅಕ್ಷರಶಃ ನರಕವಾಗಿದೆ.

ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಲಾಕ್​ಡೌನ್ ಘೋಷಣೆಯಾದಗಿನಿಂದ ವಲಸೆ ಕಾರ್ಮಿಕರ ಪರ ನಿರಂತರ ಸಂಪರ್ಕದಲ್ಲಿದ್ದುಕೊಂಡು ಅವರ ಸುರಕ್ಷತೆ ಹಾಗೂ ವಾಪಸ್ ಊರಿಗೆ ಕರೆ ತರಲು ಸಾಕಷ್ಟು ಶ್ರಮಿಸಿದರು. ಅವರೇ ಸ್ವತಃ ಎರಡ್ಮೂರು ಘಟನೆಗಳ ಬಗ್ಗೆ ಮಾಧ್ಯಮಗಳ ಮುಂದೆ ಹಂಚಿಕೊಂಡಿರುವುದು ಲಾಕ್​ಡೌನ್ ಅದೆಷ್ಟು ಭೀಕರವಾಗಿತ್ತು ಎಂಬುದು ತಿಳಿದು ಬರುತ್ತದೆ.

ಲಾಕ್​​ಡೌನ್​ ಕರಾಳ ದಿನಗಳ ಅನುಭವ ಬಿಚ್ಚಿಟ್ಟ ಶಾಸಕ ನಡಹಳ್ಳಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸೇರಿದಂತೆ ಇನ್ನುಳಿದ ತಾಲೂಕಿನ ಜನರು ಮಹಾರಾಷ್ಟ್ರ, ಗೋವಾ, ಕೇರಳ, ಗುಜರಾತ್ ಮೊದಲಾದ ರಾಜ್ಯಗಳಿಗೆ ದುಡಿಯಲೆಂದು ಗುಳೆ ಹೋಗಿರುತ್ತಾರೆ. ಈ ಸಲ ಡಿಸೆಂಬರ್ ಅಂತ್ಯಕ್ಕೆ ವಲಸೆ ಹೋದವರಿಗೆ ಬರಸಿಡಿಲಿನಂತೆ ಬಂದೆರಗಿದ ಕೊರೊನಾ ವೈರಸ್​​, ಕಾರ್ಮಿಕರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿ ಅವರ ಬದುಕನ್ನು ಮೂರಾಬಟ್ಟೆ ಮಾಡಿದೆ.

ಲಾಕ್​ಡೌನ್ ಘೋಷಣೆಯಾದ ನಂತರ ಪ್ರತಿನಿತ್ಯ ಒಂದು ಹಿಡಿ ಅನ್ನ ತಿಂದು 40 ದಿನಗಳ ಕಾಲ ಕಷ್ಟದ ಬದುಕು ಸಾಗಿಸಿದ್ದಾರೆ ವಲಸೆ ಕಾರ್ಮಿಕರು. ಇದ್ದ ಆಹಾರ ಧಾನ್ಯಗಳೂ ಖಾಲಿ ಆದ ನಂತರ ಬೇರೆಯವರಿಂದ ಆಹಾರವೂ ಸಿಗದೆ ತಮ್ಮೂರಿಗೆ ಮರಳಬೇಕೆಂದರೆ ಲಾಕ್​ಡೌನ್​​ ಸಮಸ್ಯೆ ಎದುರಾಗಿತ್ತು.

ಹೇಗಾದರೂ ತಮ್ಮ ತವರಿಗೆ ಮರಳಲು ಕಿವಿಯೋಲೆಗಳನ್ನು ಮಾರಿ ಕೈಗೆ ಸಿಕ್ಕಷ್ಟು ದುಡ್ಡು ಕೊಟ್ಟು ಯಾವುದೋ ವಾಹನ ಹತ್ತಿ ಊರಿನತ್ತ ಮುಖ ಮಾಡಿದಾಗ, ಎದುರಾಗುವ ಚೆಕ್ ಪೋಸ್ಟ್​​ಗಳಲ್ಲಿ 14 ದಿನ ಕ್ವಾರಂಟೈನ್ ಇರಿಸಿದ್ದಾರೆ. ಹೀಗೆ ಮೂರು ಕಡೆಗಳಲ್ಲಿ ಕ್ವಾರಂಟೈನ್ ಮುಗಿಸಿದ್ದರೂ ಇವರಿಗೆ ನೆಮ್ಮದಿ ಎನ್ನುವುದು ಗಗನ ಕುಸುಮವಾಗಿತ್ತು.

ನಾವು ಊರು ಸೇರುತ್ತೇವೋ ಇಲ್ಲವೋ ಎಂಬ ಹೆಣ್ಣುಮಕ್ಕಳ ಕಣ್ಣೀರು ನೋಡಿ ಸ್ವತಃ ಎರಡು ಬಾರಿ ಕಣ್ಣೀರು ಹಾಕಿದ್ದೇನೆ ಎಂದು ಶಾಸಕರು ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.