ವಿಜಯಪುರ: ಇಲ್ಲಿನ ಐತಿಹಾಸಿಕ ಗೋಲಗುಂಬಜ್ ಮ್ಯಾರಥಾನ್ಗೆ ಮಾಜಿ ಸಚಿವ ಎಂ. ಬಿ. ಪಾಟೀಲ್ ಚಾಲನೆ ಕೊಟ್ಟರು.
ಮ್ಯಾರಥಾನ್‍ನಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಉತ್ಸಾಹಿಗಳು ಭಾಗವಹಿಸಿದ್ದರು. ಬೆಳಗಿನ ಜಾವ 5 ಗಂಟೆಗೆ ಗೋಲಗುಂಬಜ್ ಆವರಣದಿಂದ 21 ಕಿ. ಮೀ ಹಾಫ್ ಮ್ಯಾರಥಾನ್ ಓಟದ ಸ್ಪರ್ಧೆಗೆ ಮಾಜಿ ಸಚಿವ ಎಂ. ಬಿ. ಪಾಟೀಲ್ ಚಾಲನೆ ನೀಡಿದರು. ಗೋಲಗುಂಬಜ್‍ನಿಂದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಎಸ್. ಪಿ. ಕಚೇರಿ ಮುಖಾಂತರ ಬಿಎಲ್ಡಿಇ ಆವರಣಕ್ಕೆ ಸ್ಪರ್ಧಿಗಳು ಆಗಮಿಸಿದರು.
ಸ್ಪರ್ಧೆಯಲ್ಲಿ ಕೀನ್ಯಾ ದೇಶದ 6 ಪ್ರತಿನಿಧಿಗಳು, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಸೇರಿದಂತೆ ಭಾರತೀಯ ಸೇನೆ, ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಆಟಗಾರರಿಗೆ ಮಾರ್ಗದುದ್ದಕ್ಕೂ ಸ್ಥಳೀಯರು ಪಾನೀಯ ವಿತರಿಸಿ, ಪ್ರೋತ್ಸಾಹಿಸಿದರು. ಒಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಯಶ್ ಗೈರು
ವೃಕ್ಷ ಅಭಿಯಾನದಡಿ ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಿರುವ ಮ್ಯಾರಥಾನ್ ರಾಯಭಾರಿಯಾಗಿರುವ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಹವಾಮಾನ ವೈಪರೀತ್ಯ ಹಿನ್ನೆಲೆ ವಿಜಯಪುರಕ್ಕೆ ಬರದೇ ಗೈರಾಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.