ವಿಜಯಪುರ: ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧಗೊಂಡಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಇಂದು ಚುನಾವಣೆ ಸಿಬ್ಬಂದಿಗೆ ಜಿಲ್ಲಾಧಿಕಾರಿ ಕರ್ತವ್ಯ ವಹಿಸಿದರು. ಇದರೊಂದಿಗೆ ಕೊರೊನಾ ಮಹಾಮಾರಿ ನಿಯಂತ್ರಣಕ್ಕೂ ವಿಶೇಷ ಕಾಳಜಿ ವಹಿಸಲಾಗಿದೆ.
ವಿಜಯಪುರ ತಾಲೂಕು 17, ಬಬಲೇಶ್ವರ 15, ತಿಕೋಟಾ 14, ಬಸವನಬಾಗೇವಾಡಿ 15, ಕೊಲ್ಹಾರ 8, ನಿಡಗುಂದಿ 8, ಮುದ್ದೇಬಿಹಾಳ 20 ಹಾಗೂ ತಾಳಿಕೋಟೆ 14 ಸೇರಿ ಒಟ್ಟು 111 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ಒಟ್ಟು 7880 ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಒಟ್ಟು 262 ಕೆಎಸ್ಆರ್ಟಿಸಿ ಬಸ್ , 58 ಮಿನಿ ಬಸ್, 38 ಕ್ರೂಸರ್ ವಾಹನ ಹಾಗೂ ಇತರೆ 46 ವಾಹನಗಳನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ.
ಓದಿ: ಬೆಂಗಳೂರಲ್ಲಿ ಕೋವಿಡ್- ವ್ಯಾಕ್ಸಿನ್ ಪ್ರಾದೇಶಿಕ ಕೇಂದ್ರ ಮಾಡಲು ಸಿದ್ಧತೆ: ಬಿಬಿಎಂಪಿ ಆಯುಕ್ತ
ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಒಟ್ಟು 1500 ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಇವರ ಜತೆ 300 ಹೋಮ್ ಗಾರ್ಡ್ ಸಹ ಬಳಸಿಕೊಳ್ಳಲಾಗುತ್ತಿದೆ. ಭದ್ರತೆಗಾಗಿ 4 ಡಿವೈಎಸ್ಪಿ, 8 ಜನ ಇನ್ಸ್ಪೆಕ್ಟರ್ಗಳು, 54 ಸಬ್ ಇನ್ಸ್ಪೆಕ್ಟರ್, 4 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. 190 ಅತಿಸೂಕ್ಷ್ಮ, 118 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಪ್ರತಿ ಬೂತ್ನಲ್ಲಿಯೂ ಪಿಪಿಇ ಕಿಟ್ಅನ್ನು ಸರ್ಕಾರ ಒದಗಿಸಿದ್ದು, ಸದ್ಯ ಕೊರೊನಾ ಕಡಿಮೆ ಇರುವ ಕಾರಣ ಯಾವುದೇ ತೊಂದರೆ ಇಲ್ಲದೆ ಚುನಾವಣೆ ನಡೆಸುವ ವಿಶ್ವಾಸದಲ್ಲಿ ಜಿಲ್ಲಾಡಳಿತವಿದೆ.