ವಿಜಯಪುರ: ಕೋವಿಡ್ ಸೋಂಕಿನಿಂದ ಗುಣಮುಖರಾದ ಇಬ್ಬರು ರೋಗಿಗಳನ್ನು ಭಾನುವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ರೋಗಿ ಸಂಖ್ಯೆ – 399 (27 ವರ್ಷ ಮಹಿಳೆ), ರೋಗಿ ಸಂಖ್ಯೆ – 457 (17 ವರ್ಷ ಯುವಕ) ಇಂದು ಜಿಲ್ಲಾಸ್ಪತ್ರೆಯಿಂದ ಮನೆಗೆ ಮರಳಿದ್ದು, ಈವರೆಗೆ ಒಟ್ಟು 33 ಕೋವಿಡ್-19 ರೋಗಿಗಳು ವೈರಾಣು ಮುಕ್ತರಾಗಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 13 ಕೊರೊನಾ ಸಕ್ರಿಯ ರೋಗಿಗಳಿದ್ದು ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ಜಿಲ್ಲೆಗೆ ಈವರೆಗೆ ವಿದೇಶದಿಂದ ಮತ್ತು ಇತರೆಡೆಯಿಂದ ಒಟ್ಟು 2,134 ಜನ ಬಂದಿದ್ದಾರೆಂದು ವರದಿಯಾಗಿದೆ.1,490 ಜನರು1 ರಿಂದ 28 ದಿನಗಳ ರೀಪೊರ್ಟಿಂಗ್ ಅವಧಿಯಲ್ಲಿದ್ದಾರೆ. 610 ಜನರು 28 ದಿನಗಳ ಐಸೊಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ಈವರೆಗೆ 2,466 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 2,373 ಪ್ರಕರಣಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಒಟ್ಟು 49 ಪಾಸಿಟಿವ್ ಪ್ರಕರಣಗಳಿವೆ. ಇನ್ನೂ 44 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ.